– ಶ್ರೀರಾಮಸೇನೆ ವತಿಯಿಂದ ಸತತ 10 ಗಂಟೆ ವಿಶೇಷ ಪೂಜೆ
ಬೆಂಗಳೂರು: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pehalgam Terrorist Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಉಭಯ ರಾಷ್ಟ್ರ ನಾಯಕರ ಹೇಳಿಕೆಗಳು ಯಾವುದೇ ಸಮಯದಲ್ಲೂ ಯುದ್ಧ ಘೋಷಿಸುವ ಭೀತಿಯನ್ನು ಉಂಟುಮಾಡಿವೆ. ಹೀಗಾಗಿ ಯುದ್ಧ (War) ಸಂಭವಿಸಿದ್ರೆ ಭಾರತೀಯ ಸೈನಿಕರಿಗೆ ಯಶಸ್ಸು ಸಿಗಲೆಂದು ಶ್ರೀರಾಮ ಸೇನೆ (Shri Ram Sena) ಸಂಘಟನೆ ವತಿಯಿಂದ ಇಂದು ನಗರದಲ್ಲಿ ಮಹಾಯಾಗ ನಡೆಸಲಾಯಿತು.
ಬೆಂಗಳೂರಿನ ರಾಜಾಜಿನಗರ ರಾಮಮಂದಿರದ ಬಿಬಿಎಂಪಿ ಮೈದಾನದಲ್ಲಿ (BBMP Ground) ಪರಶುರಾಮನ ಬೃಹತ್ ಕೊಡಲಿಯಿಟ್ಟು ರಾಮ ಭದ್ರಕಯಾಗ, ಸಂಕಲ್ಪಯಾಗ, ಪರಶುರಾಮ ಯಾಗ ನೆರವೇರಿಸಲಾಯಿತು. ಒಂದು ವೇಳೆ ಯುದ್ಧ ಸಂಭವಿಸಿದ್ರೆ ಪಾಕಿಸ್ತಾನ ಉಗ್ರರ ಹುಟ್ಟಡಗಿಸಬೇಕೆಂದು ಹಾರೈಸಿ, ಭಾರತೀಯ ಯೋಧರಿಗೆ (Indian Soldiers) ಆತ್ಮಸ್ಥೈರ್ಯ, ಶಕ್ತಿ ತುಂಬಲು ಸಂಕಲ್ಪ ಮಾಡಿ ಸತತ 10 ಗಂಟೆ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik), ಹಿಂದೂ ಮುಖಂಡರಾದ ಗಂಗಾಧರ್ ಕುಲಕರ್ಣಿ, ರಾಮಾನಾನಂದ ಶ್ರೀಗಳು ಸೇರಿದಂತೆ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಇದನ್ನೂ ಓದಿ: ಪಹಲ್ಗಾಮ್ ಅಟ್ಟಹಾಸದ ಬಳಿಕ ಪಾಕ್ ಪ್ರಜೆಗಳ ಗಡೀಪಾರು – 55,000 ಮಂದಿಗಿಲ್ಲ ಗಡೀಪಾರಿನ ಆತಂಕ!
ಪರಶುರಾಮನ ಕೊಡಲಿ ಹಿಡಿದು ಶೋಭಯಾತ್ರೆ:
ವಿಶೇಷ ಹೋಮ, ಹವನದ ಬಳಿಕ ಬೃಹತ್ ಗಾತ್ರದ ಪರಶುರಾಮನ 15 ಅಡಿಯ ಮೂರ್ತಿಯೊಂದಿಗೆ ಕೊಡಲಿ ಹಿಡಿದು ಶ್ರೀ ರಾಮಸೇನೆಯಿಂದ ಶೋಭಯಾತ್ರೆ ನಡೆಸಲಾಯಿತು. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಶ್ರೀ ರಾಮ ಸೇನೆ ಸಂಘಟನೆಯಿಂದ ಪೆಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಶ್ರದ್ಧಾಂಜಲಿ & ಯೋಧರಿಗೆ ಧೈರ್ಯ, ಸ್ಥೈರ್ಯ, ಶಕ್ತಿ ತುಂಬಲು ಯಾಗ ಮಾಡುತ್ತಿದ್ದೇವೆ. ಹೋಮ, ಹವನ, ಯಜ್ಞ ಮಾಡಿ ನಮ್ಮ ಯೋಧರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ.ಸ್ವಾತಂತ್ರ‍್ಯ ಬಂದು ಇಷ್ಟು ವರ್ಷಗಳಾದರೂ ಹಿಂದೂಗಳಿಗೆ ಸುರಕ್ಷತೆ ಇಲ್ಲ. ಹೊರಗಡೆ ಎಷ್ಟು ಶತ್ರುಗಳಿದ್ದಾರೋ ದೇಶದ ಒಳಗೂ ಅಷ್ಟೇ ಶತ್ರುಗಳಿದ್ದಾರೆ. ನಮ್ಮಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗುವವರು ಇದ್ದಾರೆ. ಈ ಹಿನ್ನೆಲೆ ಸಮಾಜಕ್ಕೆ, ಹಿಂದೂ ಧರ್ಮಕ್ಕೆ ಬಲ ತುಂಬಲು ಈ ಯಾಗ ಮಾಡ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಭಾರತ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು, ನಮ್ಮ ಪಡೆಗಳನ್ನೂ ಬಲಪಡಿಸಿದ್ದೇವೆ: ಪಾಕ್ ಸಚಿವ
ಇದೇ ವೇಳೆ ಸಚಿವ ಆರ್.ಬಿ ತಿಮ್ಮಾಪೂರ್ ಹೇಳಿಕೆ ವಿಚಾಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸ್ವಾತಂತ್ರ‍್ಯ ಬಂದಾಗಿನಿಂದ ಇಲ್ಲಿವರೆಗೆ ಮುಸ್ಲಿಂ ತುಷ್ಟೀಕರಣ, ಮತಕ್ಕೆ ಹಪಾಹಪಿ ಮಾಡೋದು, ಆ ಸಮುದಾಯವನ್ನ ಓಲೈಕೆ ಮಾಡೋದನ್ನೆ ಮಾಡಿಕೊಂಡು ಬಂದಿದೆ. ಈ ನೀತಿಗೆಟ್ಟ, ಮಾನಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಸತ್ತವರ ಕುಟುಂಬದ ನೋವು ಗೊತ್ತಾಗುತ್ತಾ? ಇಲ್ಲಿ ಯಾರನ್ನ ಬಚಾವ್ ಮಾಡ್ತಾ ಇದ್ದಾರೆ? ಮುಸ್ಲಿಮರ ತುಷ್ಟೀಕರಣವಾ? ಗಾಂಧೀಜಿಯವರು ಪಕ್ಷವನ್ನ ವಿಸರ್ಜನೆ ಮಾಡಿ ಅಂತ ಅವತ್ತೇ ಹೇಳಿದ್ರು. ಆದ್ರೆ ಕಾಂಗ್ರೆಸ್ ಅವರಿಗೆ ದೇಶ ಬೇಡ ಮುಸ್ಲಿಮರ ಮತ ಬೇಕಾಗಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಭಾರತ-ಪಾಕ್ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್ ಶುಚಿಗೊಳಿಸುವ ಕಾರ್ಯ ಚುರುಕು