ರಾಮನಗರ: ಕಾಂಗ್ರೆಸ್‍ನ ಹಗರಣ, ಭ್ರಷ್ಟಾಚಾರದ ವಿಚಾರ ದಿಕ್ಕು ತಪ್ಪಿಸಲು ವಕ್ಫ್ ವಿಚಾರ ಮುನ್ನೆಲೆಗೆ ಬಂದಿದೆ. ಈ ಮೂಲಕ ವಾಲ್ಮೀಕಿ ಮತ್ತು ಮುಡಾ ಹಗರಣ ಮುಚ್ಚಿಹಾಕಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಆರೋಪಿಸಿದ್ದಾರೆ.
ತಿಟ್ಟಮಾರನಹಳ್ಳಿಯಲ್ಲಿ ಚುನಾವಣಾ ಪ್ರಚಾರದ (Channapatna bypoll) ವೇಳೆ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸರ್ಕಾರ ಸ್ವಯಂ ಅಪರಾಧಗಳಿಂದ ಪಥನವಾಗಲಿದೆ. ಸರ್ಕಾರವನ್ನು ಬೇರೆ ಯಾರು ಬೀಳಿಸುವುದಿಲ್ಲ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಹೇಳಿದ್ದಾರೆ.
Advertisement
ಶಕ್ತಿ ಯೋಜನೆ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ, ಗ್ಯಾರಂಟಿ ನಿಲ್ಲಿಸಲು ಈ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. ಶಕ್ತಿ ಯೋಜನೆ ಬೇಡ ಅಂತ ಯಾರು ಹೇಳ್ತಾರೆ. ಈಗಾಗಲೇ ಅನ್ನಭಾಗಕ್ಕೂ ಸಾಕಷ್ಟು ನಿಯಮ ಜಾರಿ ಮಾಡಿದ್ದಾರೆ. ರೇಷನ್ ಕಾರ್ಡ್ ಗಳನ್ನು ಡಿಲಿಟ್ ಮಾಡುತ್ತಿದ್ದಾರೆ. ಹಂತಹಂತವಾಗಿ ಗ್ಯಾರಂಟಿ ನಿಲ್ಲಿಸುತ್ತಾರೆ. ಅದನ್ನೆ ಡಿಕೆಶಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಎಂದರು.
Advertisement
Advertisement
ಚನ್ನಪಟ್ಟಣದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ನನಗೆ ನನ್ನ ಕ್ಷೇತ್ರದಲ್ಲಿ ಎಷ್ಟು ಕೆರೆ ಇದೆ ಎಂದು ಗೊತ್ತಿಲ್ಲ ಎಂದಿದ್ದಾರೆ. ಬಹುಶಃ ನನಗೆ ಗೊತ್ತಿರುವಷ್ಟು ಅವರಿಗೆ ಗೊತ್ತಿಲ್ಲ. ಇಗ್ಗಲೂರು ಜಲಾಶಯ ಇಲ್ಲದಿದ್ರೆ ಕಾಂಗ್ರೆಸ್‍ನವರು ನೀರು ಎಲ್ಲಿ ತುಂಬಿಸುತ್ತಿದ್ದರು? ಯಾರು ಸ್ವಯಂ ಘೋಷಿತ ಆಧುನಿಕ ಭಗೀರಥ ಅಂತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
Advertisement
ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದೇನೆ. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇನೆ. ತಿಟ್ಟಮಾರನಹಳ್ಳಿ ನನಗೆನೂ ಹೊಸದೇನಲ್ಲ. ಇಲ್ಲಿನ ಜನ ಮನೆಯ ಮಗನ ರೀತಿ ಆಶೀರ್ವಾದ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ನಿಮ್ಮ ತೀರ್ಮಾನಕ್ಕೆ ಅವನನ್ನ ಬಿಟ್ಟಿದ್ದೇನೆ. ನಾವೇನಾದ್ರೂ ರೈತರ ಪರವಾಗಿ ಕೆಲಸ ಮಾಡಿದ್ದರೆ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.