ಬೆಳಗಾವಿ: ಕಾಂಗ್ರೆಸ್‌ನವರು (Congress) ಬ್ರಿಟಿಷರನ್ನು (British) ಒದ್ದೊಡಿಸಿದವರು. ಬಿಜೆಪಿಯವರು ಯಾವ ಲೆಕ್ಕ ನಮಗೆ ಎಂದು ಪ್ರಶ್ನಿಸಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಿದ್ಧಾಂತವೇ ಗೊತ್ತಿಲ್ಲ. ಸಿದ್ಧಾಂತ ಬಗ್ಗೆ ಗೌರವವೇ ಇಲ್ಲ.12 ವರ್ಷ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಮೂರೂವರೆ ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ. ಒಂದೇ ಒಂದು ಯೋಜನೆ ಬಡವರ ಪರ, ರೈತರ ಪರ ತಂದಿದ್ದಾರಾ ಎಂದು ಪ್ರಶ್ನಿಸಿದರು.
ಸಣ್ಣ ರಾಜ್ಯಗಳಿಗಿಂತ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ಬರುವ ಬಗ್ಗೆ ಅವರು ಚರ್ಚೆ ಮಾಡುವುದಿಲ್ಲ. ಇವರಿಗೆ ರಾಜ್ಯದ ಹಿತಾಸಕ್ತಿ ಬೇಕಿಲ್ಲ. ಇವರಿಗೆ ಹಿಂದೂ ಮುಸ್ಲಿಂ ಬೇಕು. ಮಸೀದಿ ದೇವಾಲಯಗಳು ಬೇಕು.ಈ ರಾಜ್ಯದ ಬಡವರ ಬಗ್ಗೆ ಚರ್ಚೆ ಮಾಡಲು ಯಾರಿಗೂ ಇಷ್ಟ ಇಲ್ಲ ಎಂದು ದೂರಿದರು. ಇದನ್ನೂ ಓದಿ: ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ
ವಕ್ಫ್ (Waqf) ಬಗ್ಗೆ ಮಾತನಾಡುವ ಇವರು 2019-20ನೇ ಸಾಲಿನಲ್ಲಿ ಇವರು ಎಷ್ಟು ಜನರಿಗೆ ನೋಟಿಸ್ ನೀಡಿದ್ದಾರೆ ನನ್ನ ಹತ್ತಿರ ದಾಖಲೆ ಇದೆ. ವಕ್ಫ್ ನೋಟಿಸ್ ಕೊಟ್ಟಿದ್ದು ಯಾರು? ರೈತರ ಒಕ್ಕಲೆಬ್ಬಿಸಿದ್ಯಾರು? ಬಿಜೆಪಿಯವರೇಈಗ ರೈತರ ವಿಚಾರದಲ್ಲಿ ಕೇಸರಿ ಟವಲ್ ಹಾಕಿ ಊರುರು ಅಡ್ಡಾಡಿದ್ರೆ ಜನಕ್ಕೆ ಗೊತ್ತಾಗಲ್ವಾ?ಇವರದ್ದು ನಾಟಕ ಕಂಪನಿ ಎಂದು ವಾಗ್ದಾಳಿ ನಡೆಸಿದರು.
ಮುಡಾ ಕೇಸ್ ಸಿಬಿಐಗೆ ನೀಡಿದರೂ ಕಷ್ಟ ಆಗಲ್ಲ, ಜಾರಿ ನಿರ್ದೇಶನಾಲಯಕ್ಕೆ ನೀಡಿದರೂ ಕಷ್ಟ ಆಗಲ್ಲ.ಇದೆಲ್ಲ ರಾಜಕೀಯ ಪ್ರೇರಿತವಾಗಿದೆ.ಸಿದ್ದರಾಮಯ್ಯ ಹೊಡೆತಕ್ಕೆ ಇವರು ಶೇಕ್ ಶೇಕ್ ಆಗುತ್ತಿದ್ದಾರೆ. ಸಿದ್ದರಾಮಯ್ಯರನ್ನ ಕುಗ್ಗಿಸಲು ಕೇಸ್ ಹಾಕುತ್ತಿದ್ದಾರೆ. ಈ ಕೇಸ್‌ಗಳಿಗೆ ನಾವು ಹೆದರಲ್ಲ ಎಂದರು.