– ಜ.20 ರಂದು ಶ್ರೀರಂಗಪಟ್ಟಣ ಬಂದ್‌ಗೆ ಕರೆ
ಮಂಡ್ಯ: ವಕ್ಫ್ ಭೂತ, ಸಕ್ಕರಿ ನಗರಿ ಮಂಡ್ಯ ಜಿಲ್ಲೆಯ ರೈತರನ್ನ (Mandya Farmers) ಬಿಟ್ಟೂಬಿಡದೆ ಕಾಡುತ್ತಿದೆ. ಸಾಕಷ್ಟು ರೈತರ ಜಮೀನಿನ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ (Waqf Property) ಎಂದು ನಮೂದು ಆಗುತ್ತಿದೆ. ಇದು ಜಿಲ್ಲೆಯ ರೈತರ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶ್ರೀರಂಗಪಟ್ಟಣ ಬಂದ್‌ಗೂ (Srirangapatna Bandh) ಕರೆ ನೀಡಲಾಗಿದೆ.
Advertisement
ಹೌದು. ಮಂಡ್ಯದ (Mandya) ಕೋಟೆನಗರಿ ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಕ್ಫ್ ಭೂತ ಆತಂಕ ಸೃಷ್ಠಿ ಮಾಡಿದೆ. ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಹೆಚ್ಚು ರೈತರ ಆರ್‌ಟಿಸಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದು ಆಗಿದೆ. ಸ್ವಾಧೀನದಾರರ ಕಲಂನಲ್ಲಿ ರೈತರ ಹೆಸರಿದ್ರೂ, ಋಣ ಕಲಂನಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದನ್ನೂ ಓದಿ: ಮೈಕ್ರೊ ಫೈನಾನ್ಸ್ ಕಿರುಕುಳ ಆರೋಪ; ಗ್ರಾಮಗಳಿಗೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ
Advertisement
Advertisement
ಸಾಮಾನ್ಯವಾಗಿ ಜಮೀನನ ಮೇಲೆ ಸಾಲ ತೆಗೆದುಕೊಂಡರೇ, ಕ್ರಯ ಮಾಡಿಸಿದ್ರೆ ಮಾತ್ರ ಋಣ ಕಲಂನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ಉಲ್ಲೇಖವಾಗುತ್ತದೆ. ಆದರೆ ಬಹುತೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. 2014-15ರಲ್ಲಿ ಈ ರೀತಿ ಉಲ್ಲೇಖವಾಗಿದೆ. ಕೇವಲ ರೈತರ ಜಮೀನು ಮಾತ್ರವಲ್ಲದೇ ಸರ್ಕಾರಿ ಶಾಲೆ, ಪಾರಂಪರಿಕ ಕಟ್ಟಡ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ಇದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮತ್ತೆ ಒಂದಾಗುತ್ತಾ ಬಿಜೆಪಿ-ಉದ್ಧವ ಸೇನೆ?; ರಾಜ್ ಠಾಕ್ರೆ ಗೆಳೆಯ, ಉದ್ಧವ್ ಶತ್ರು ಅಲ್ಲ ಎಂದ ಮಹಾರಾಷ್ಟ್ರ ಸಿಎಂ
Advertisement
ಅಂದಹಾಗೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿರುವ ಈ ವಕ್ಫ್ ಬೋರ್ಡ್‌ನ ಗೋಲ್ಮಾಲ್ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜನವರಿ 20 ರಂದು ಶ್ರೀರಂಗಪಟ್ಟಣ ಬಂದ್‌ಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ರೈತರು ಸಹ ಜಾನುವಾರುಗಳ ಜೊತೆ ರಸ್ತೆಗೆ ಇಳಿಯಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ರಾಜಕೀಯ ಮೈಲೇಜ್‌ಗೋಸ್ಕರ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ – ಅಣ್ಣಾಮಲೈ