ರಾಯಚೂರು: ಮಂತ್ರಾಲಯ (Mantralaya) ರಾಯರ ಮಠದ ಜಾಗ ಆದೊನಿ ನವಾಬರು ಕೊಟ್ಟಿದ್ದು ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ (CM Ibrahim) ಹೊಸ ಬಾಂಬ್ ಸಿಡಿಸಿದ್ದಾರೆ.
ರಾಯಚೂರಿನಲ್ಲಿ (Raichuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂತ್ರಾಲಯ ಮಠದ ಜಾಗ ಆದೊನಿ ನವಾಬರು ಕೊಟ್ಟಿದ್ದು, ಅದನ್ನು ಹೇಗೆ ವಕ್ಫ್ ಬೋರ್ಡ್ ಆಸ್ತಿ ಎಂದು ಯಾರದರೂ ಕೇಳಲು ಹೋಗಿದ್ರಾ? ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಬಂದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದು ಹೇಳಿದ್ದರು. ಆಗ ಮಂತ್ರಾಲಯವನ್ನು ಖಾಜಿಗೆ ಕೊಟ್ಟ ಜಾಗ ರದ್ದುಗೊಳಿಸಿ, ಆದೊನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು. ಈ ಕಥೆಯನ್ನ ಮಂತ್ರಾಲಯ ಸ್ವಾಮೀಜಿಗಳೇ ಹೇಳುತ್ತಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ
ಶೃಂಗೇರಿ (Sringeri) ಶಾರದಾ ಪೀಠದ ಮೇಲೆ ಪೇಶಾವರರು ದಾಳಿಗೆ ಬಂದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾ ಪೀಠವನ್ನ ಸ್ಥಾಪನೆ ಮಾಡಿದ್ದರು. ಇದು ಇತಿಹಾಸ, ಇದು ನಮ್ಮ ಪರಂಪರೆ, ಇದು ನಮ್ಮ ಸಂಸ್ಕೃತಿ. ಈ ಚಿಲ್ಲರೆಗಳು ರಾಜಕಾರಣಕ್ಕೆ ಬಂದು ಈ ಸಂಸ್ಕೃತಿಯನ್ನ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದರಿಂದ ಯಾರೂ ಆತಂಕ ಪಡುವಂತದ್ದಿಲ್ಲ. ತಹಶೀಲ್ದಾರ, ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರಕರಣದಿಂದ ಪ್ರಕರಣಕ್ಕೆ ವ್ಯತ್ಯಾಸ ಇರುತ್ತದೆ. ಅನುಭವ ಇಲ್ಲದಿರುವ ಒಬ್ಬ ಮಂತ್ರಿ ಆವೇಶದಲ್ಲಿ ಏನೋ ಮಾಡಲು ಹೋಗಿ ಏನೋ ಮಾಡಿದ್ದಾನೆ ಎಂದು ತಿಳಿಸಿದರು.
ಹೆಚ್‌ಡಿ ಕುಮಾರಸ್ವಾಮಿ ಬಗೆಗಿನ ಜಮೀರ್ ಅಹ್ಮದ್ (Zameer Ahmed) ಹೇಳಿಕೆಯನ್ನು ಖಂಡಿಸುತ್ತೇನೆ. ಅವರ ಹೇಳಿಕೆ ತಪ್ಪು, ಒಕ್ಕಲಿಗರ ಸಮಾಜ, ಮುಸ್ಲಿಂ ಸಮಾಜ, ಟಿಪ್ಪು ಸುಲ್ತಾನ್ ಕಾಲದಿಂದ ಕೂಡಿಕೊಂಡು ಬಂದಿದೆ. ಆ ಸಮಾಜಕ್ಕೆ ನೋವಾಗಿದೆ ನಾನೇ ಕ್ಷಮೆ ಕೇಳುತ್ತೇನೆ. ದೇವೇಗೌಡರ ವಯಸ್ಸಿಗಾದರೂ ನಾವು ಗೌರವ ಕೊಡಬೇಕು. ಕಾಂಗ್ರೆಸ್ ಅಧ್ಯಕ್ಷರು ಕೂಡ ಇದನ್ನ ತಪ್ಪು ಎಂದು ಹೇಳಿದ್ದಾರೆ. ಈಗಾಗಲೇ ಮತದಾನವಾಗಿ ಪರಿಣಾಮ ಬಗ್ಗೆ ನಾನೇನು ಹೇಳಲ್ಲ. ದೇವೇಗೌಡರು (HD Devegowda) ಪುತ್ರ ವಾತ್ಸಲ್ಯದಲ್ಲಿ ಸಿಕ್ಕಾಕಿಕೊಂಡಿದ್ದಾರೆ ಎಂದರು.ಇದನ್ನೂ ಓದಿ: ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ; ರೆಸಾರ್ಟ್ ಸೀಲ್‌ಡೌನ್, ಮಾಲೀಕ ವಶಕ್ಕೆ