ಬೀದರ್: ರಾಜ್ಯದಲ್ಲಿ ವಕ್ಫ್ ವಿವಾದ (Waqf Dispute) ಕಡಿಮೆಯಾಗುತ್ತಿದ್ದಂತೆ ಮತ್ತೆ ಬೀದರ್ (Bidar) ಜಿಲ್ಲೆಯಲ್ಲಿ ವಕ್ಫ್ ವಕ್ರದೃಷ್ಟಿ ಬಿದ್ದಿದೆ. ಇದೀಗ ಲಿಂಗಾಯತ ಮಹಾಮಠದ ಬಸವಗಿರಿ (Basavagiri) ವಕ್ಫ್ ಪಾಲಾಗಿದೆ.
ಈಗಾಗಲೇ ರೈತರ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಜಾಗಗಳು ಸೇರಿದಂತೆ ಗಡಿ ಜಿಲ್ಲೆ ಬೀದರ್‌ನಲ್ಲಿ ಒಟ್ಟು 13 ಸಾವಿರಕ್ಕೂ ಅಧಿಕ ಆಸ್ತಿ ವಕ್ಫ್ ಪಾಲಾಗಿದೆ. ಇದೀಗ ಮತ್ತೆ ಬಗೆದಷ್ಟು ಬಯಲಾಗುತ್ತಿದ್ದು, ವಿಶ್ವಗುರು ಬಸವಣ್ಣನವರ ವಚನಮಂತ್ರ ಪಠಿಸುವ ಲಿಂಗಾಯತ ಮಹಾಮಠದ ಬಸವಗಿರಿ ಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ.ಇದನ್ನೂ ಓದಿ: BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ
Advertisement
Advertisement
ಬೀದರ್‌ನ ಪಾಪನಾಶ ದೇವಸ್ಥಾನದ ಬಳಿಯಿರುವ ಬಸವಗಿರಿಯ ಸರ್ವೇ ನಂ.37ರ 5 ಎಕರೆ 19 ಗುಂಟೆ ಜಾಗ 2019ರಲ್ಲಿ ವಕ್ಫ್ಗೆ ಸೇರಿಸಿದ್ದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 2008 ರಲ್ಲಿ ಈ ಬಸವಗಿರಿ ಉದ್ಘಾಟನೆಯಾಗಿದ್ದು, ಬಹುತೇಕ 16 ವರ್ಷದಿಂದ ಪ್ರತಿ ದಿನ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡಿ ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ವಚನಗಳ ಪಠಣೆ ಮಾಡುತ್ತಾರೆ.
Advertisement
ಪ್ರತಿ ವರ್ಷ ಅದ್ದೂರಿಯಾಗಿ ವಚನ ವಿಜಯೋತ್ಸವ ಕಾರ್ಯ ಮಾಡಿ ಸಾಧಕರನ್ನು ಗುರುತಿಸಿ, ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸುತ್ತಾರೆ. ಈ ಶರಣ ವಿಶ್ವವಿದ್ಯಾಲಯ ಭಕ್ತಿ ಭವನ ಇಂದು ವಕ್ಫ್ ಪಾಲಾಗಿದ್ದು, ವಕ್ಫ್ ಬೋರ್ಡ್ ಬಸವಣ್ಣನವರ ಜಾಗವನ್ನು ಬಿಡದೆ ಕಬಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ:ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಡಿವೈನ್ ಸ್ಟಾರ್- ರಿಷಬ್ ಶೆಟ್ಟಿ ಪೋಸ್ಟರ್ ಔಟ್