ಬೀದರ್: ರೈತರ ಜಮೀನಿನ ಬಳಿಕ ಇದೀಗ ಜಿಲ್ಲೆಯಲ್ಲಿ ಐತಿಹಾಸಿಕ ತಾಣಗಳ ಮೇಲೆಯೂ ವಕ್ಫ್ (Waqf Property) ವಕ್ರದೃಷ್ಠಿ ಬೀರಿದೆ.
ಗಡಿ ಜಿಲ್ಲೆ ಬೀದರ್‌ನ (Bidar) ಐತಿಹಾಸಿಕ ಕೋಟೆ, ಅಷ್ಟೂರಿನ ಗುಂಬಜ್, ಪ್ರವಾಸಿ ತಾಣಗಳು ವಕ್ಫಗೆ ಸೇರ್ಪಡೆಯಾಗಿದೆ.ಇದನ್ನೂ ಓದಿ: ಶಿವಮೊಗ್ಗ | ಅಕ್ರಮವಾಗಿ ಚಿರತೆಯ ಹಲ್ಲು, ಉಗುರು ಸಾಗಾಟಕ್ಕೆ ಯತ್ನ – ಆರೋಪಿ ಅರೆಸ್ಟ್
ಬಹಮನಿ ಸುಲ್ತಾನರ (Bahamani Sultana) ಕಾಲದ ಕೋಟೆ ಆವರಣದಲ್ಲಿರುವ ಸೋಲಾ ಕಂಬ, ಅಷ್ಟೂರಿನಲ್ಲಿರುವ 15 ಗುಂಬಜ್‌ಗಳ ಪೈಕಿ 14 ಗುಂಬಜ್‌ಗಳು ಹಾಗೂ ಬರೀದ್ ಶಾಹಿ ಉದ್ಯಾನವನದಲ್ಲಿರುವ ಥಾಂಬ್ ಆಫ್ ಅಮೀರ್ ಬರೀದ್, ಖಾನ್ ಜಿಹಾನ್ ಬರೀದ್‌ಗಳು ಕೂಡ ವಕ್ಫ್ಗೆ ಸೇರ್ಪಡೆಯಾಗಿದೆ.
ಈಗಾಗಲೇ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ 960ಕ್ಕೂ ಹೆಚ್ಚು ಎಕರೆ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಲಾಗಿದೆ. ಇನ್ನೂ ಇಡೀ ಧರ್ಮಾಪುರ ಗ್ರಾಮವೇ ವಕ್ಫ್ ಆಸ್ತಿಯಾಗಿದೆ. ಇದಿಷ್ಟೇ ಅಲ್ಲದೇ ಜಿಲ್ಲೆಯ ಹಲವು ಮಠ-ಮಂದಿರ, ಸರ್ಕಾರಿ ಕಚೇರಿ ಮೇಲೆಯೂ ವಕ್ಫ್ ಕಪ್ಪುಛಾಯೆ ಬಿದ್ದಿದೆ. ಈಗ ಕೋಟೆ ಆವರಣದ ಒಂದಿಷ್ಟು ಭಾಗ, ಐತಿಹಾಸಿಕ ಸ್ಮಾರಕಗಳೂ ವಕ್ಫ್ ಆಸ್ತಿಯೆಂದು ಉಲ್ಲೇಖವಾಗಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಕಡಿಮೆ ಬೆಲೆಗೆ ಅಕ್ಕಿ, ಗೋಧಿ ಹಿಟ್ಟು ಮಾರಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ