ಧಾರವಾಡ: ಒಂದು ವರ್ಷದ ಹಿಂದೆಯೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿ (PM Narendra Modi) ಗಮನ ಸೆಳೆಯಲು ಯತ್ನಿಸಿರುವ ಸನ್ನಿವೇಶ ತಡವಾಗಿ ಬೆಳಿಕಿಗೆ ಬಂದಿದೆ.
ಹೌದು. ಧಾರವಾಡದ (Dharwad) ಉಪ್ಪಿನಬೆಟಗೇರಿ (Uppinbetageri) ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಎಂಬುವವರು ಕಳೆದ ವರ್ಷ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.ಇದನ್ನೂ ಓದಿ: ಆರ್.ಆರ್ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
ಉಪ್ಪಿನಬೆಟಗೇರಿ ಗ್ರಾಮದ ಅನೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರು ಉಲ್ಲೇಖಿಸಲಾಗಿತ್ತು. ಇದಕ್ಕಾಗಿ ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಕೃಷ್ಣಪ್ಪ ಪ್ರಧಾನಿ ಮೋದಿ ಗಮನಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.
ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಹಾಗೂ ಯಾವ ಮಾನದಂಡದ ಮೇಲೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ ಕೃಷ್ಣಪ್ಪ ಪತ್ರ ಬರೆದಿದ್ದರು. 2023ರ ನ.28ರಂದು ಪ್ರಧಾನಿಗೆ ಪತ್ರ ಕಳುಹಿಸಿದ್ದರು. ಡಿ.2ರಂದು ಪತ್ರ ಪ್ರಧಾನಿ ಕಚೇರಿ ತಲುಪಿದ್ದು, ಡಿ.8ರಂದು ಕೃಷ್ಣಪ್ಪಗೆ ಪಿಎಂ ಕಚೇರಿಯಿಂದ ಕರೆ ಬಂದಿತ್ತು. ಪತ್ರ ಬರೆದು, ದೂರು ಕೊಡುತ್ತಿರುವುದು ನೀವೆನಾ? ಎಂದು ಸಿಬ್ಬಂದಿ ಪ್ರಶ್ನಿಸಿ, ಖಚಿತಪಡಿಸಿಕೊಂಡಿದ್ದರು. ಜೊತೆಗೆ ನಿಮ್ಮ ದೂರು ಪ್ರಧಾನಿಗಳ ಗಮನಕ್ಕೆ ತರುವುದಾಗಿ ಸಿಬ್ಬಂದಿ ತಿಳಿಸಿದ್ದರು.
ಇದೀಗ ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ಬುಗಿಲೆದ್ದಿದೆ.ಇದನ್ನೂ ಓದಿ: 2 ದಿನಗಳಿಂದ ನಾಪತ್ತೆಯಾಗಿದ್ದ 50ರ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆ