– ಕಂದಾಯ ಇಲಾಖೆಯಿಂದ ಅಧಿಕೃತ ವಿವರ ಪ್ರಕಟ
ಬೆಂಗಳೂರು: ಉಪಚುನಾವಣೆ ಸಮಯದಲ್ಲಿ ವಕ್ಫ್ ಆಸ್ತಿ (Waqf Property) ವಿವಾದ ಜೋರಾಗುತ್ತಿದ್ದಂತೆ ಸರ್ಕಾರ ಈಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಕೆಲ ರೈತರಿಗೆ (Farmers) ನೀಡಿದ್ದ ನೋಟಿಸ್ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
Advertisement
ಈ ಸಂಬಂಧ ಕಂದಾಯ ಇಲಾಖೆ (Revenue Department) ಕಾಂಗ್ರೆಸ್ ಸರ್ಕಾರ ಅಧಿಕಾರ ಸ್ವೀಕರಿಸಿದ ದಿನದಿಂದ ಹಿಡಿದು ಇಲ್ಲಿಯವರೆಗಿನ ಜಿಲ್ಲಾವಾರು ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಜೂನ್ 01, 2023 ರಿಂದ ಹಿಡಿದು ಈ ವರ್ಷದ ಅಕ್ಟೋಬರ್ 31 ರ ಅವಧಿವರೆಗೆ ಐದು ಜಿಲ್ಲೆಯ ಒಟ್ಟು 423 ಆಸ್ತಿಗೆ ನೋಟಿಸ್ ನೀಡಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸರ್ ಎಂ.ವಿಶ್ವೇಶ್ವರಯ್ಯ ಓದಿದ್ದ ಸರ್ಕಾರಿ ಶಾಲೆಯೂ ವಕ್ಫ್ ಹೆಸರಿಗೆ
Advertisement
31 ಜಿಲ್ಲೆಗಳ ಪೈಕಿ ಬೆಳಗಾವಿ 4, ಕಲಬುರಗಿ 166, ವಿಜಯನಗರ 14, ವಿಜಯಪುರ 120, ಯಾದಗಿರಿ 119 ಸೇರಿದಂತೆ ಒಟ್ಟು 423 ಆಸ್ತಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಾಗಲಕೋಟೆ| 2 ಹಿಂದೂ ಸ್ಮಶಾನ ಈಗ ವಕ್ಫ್ ಆಸ್ತಿ!
Advertisement
ಈ ಪೈಕಿ ಬೆಳಗಾವಿಯ 4 ಆಸ್ತಿಗೆ ನೀಡಿದ್ದ ನೋಟಿಸ್ ಹಿಂಪಡೆಯಲಾಗಿದೆ. ಕಲಬುರಗಿ, ವಿಜಯನಗರ, ವಿಜಯಪುರಲ್ಲಿ ನೋಟಿಸ್ ಹಿಂದಕ್ಕೆ ಪಡೆಯಲು ಕ್ರಮವಹಿಸಲಾಗಿದೆ.
Advertisement
ಯಾದಗಿರಿಯ 119 ನೋಟಿಸ್ ಪೈಕಿ 30 ನೋಟಿಸ್ ಅನ್ನು ಅಕ್ಟೋಬರ್ 25 ರಂದು ಹಿಂದಕ್ಕೆ ಪಡೆಯಲಾಗಿದೆ. 61 ಪ್ರಕರಣಗಳಿಗೆ ಕೋರ್ಟ್ ತಡೆಯಾಜ್ಞೆ ಇದೆ. 28 ಪ್ರಕರಣಗಳಲ್ಲಿ ನೋಟಿಸ್ ನೀಡಿದವರಿಗೂ ಮತ್ತು ಪಹಣಿಯಲ್ಲಿರುವ ಹೆಸರಿಗೂ ವ್ಯತ್ಯಾಸ ಇರುವುದಿಂದ ಜಾರಿಯಾಗಿಲ್ಲ ಎಂದು ತಿಳಿಸಿದೆ.