ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿವಾದಿತ ಜಾಗಕ್ಕಾಗಿ ವಕ್ಫ್ ಹಾಗೂ ರೈತರ (Farmers) ನಡುವಿನ ಸಂಘರ್ಷ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರಿಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಡಿಸಿ, ತಿಮ್ಮಸಂದ್ರ ಗ್ರಾಮದ 13 ಹಾಗೂ 13-1, 13-2, 13-3 ಸೇರಿದಂತೆ ಸರ್ವೆ ನಂಬರ್ 20ರ ಜಮೀನುಗಳು ಮೂಲ ಫಕೀರ್ ಇನಾಂತಿ ಜಮೀನುಗಳಾಗಿವೆ. ಕಂದಾಯ ಇಲಾಖೆಯಲ್ಲಿ ಇರುವ ದಾಖಲೆಗಳ ಪ್ರಕಾರ ರೈತರಿಗೆ ಈ ಜಮೀನುಗಳಿಗೆ ಮಂಜೂರಾಗಿಲ್ಲ. ಬದಲಾಗಿ 1975ರ ನಂತರ ಒಬ್ಬರಿಂದ ಒಬ್ಬರಿಗೆ ಕ್ರಯ ಆಗಿ ಪಹಣಿಗಳು ಬದಲಾವಣೆ ಆಗಿವೆ. ಇದನ್ನೂ ಓದಿ: Waqf Land Row | ವಿವಾದಿತ ಜಮೀನಿನಲ್ಲಿ ಉಳುಮೆ – ರೈತರ ಮೇಲೆ ಕೇಸ್ ದಾಖಲು, ಟ್ರ್ಯಾಕ್ಟರ್ ಜಪ್ತಿ
2002 ರಲ್ಲಿ ಈ ಜಮೀನುಗಳು ತಮಗೆ ಸೇರಬೇಕು ಅಂತ ಜಾಮೀಯಾ ಮಸೀದಿ ಟ್ರಸ್ಟ್ ನವರು ಎಸಿ ನ್ಯಾಯಾಲಯಕ್ಕೆ ಹೋಗಿದ್ದು ನ್ಯಾಯಾಲಯ ರೈತರಿಗೆ ಯಾವುದೇ ರೀತಿಯ ಮಂಜೂರಾತಿ ಆದ ಬಗ್ಗೆ ದಾಖಲೆಗಳಿಲ್ಲದ ಕಾರಣ ಇದು ವಕ್ಫ್ ಆಸ್ತಿಯೆಂದು ಆದೇಶ ಮಾಡಿದೆ. ಇದೇ ಆದೇಶವನ್ನ ಜಿಲ್ಲಾಧಿಕಾರಿಗಳ ನ್ಯಾಯಾಲಯ ಎತ್ತಿ ಹಿಡಿದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 2,021 ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಮಾರ್ಪಾಡು
ಇನ್ನೂ ವಕ್ಪ್ ಮಂಡಳಿಯಲ್ಲೂ ಸಹ ವಿಚಾರಣೆಯಾಗಿ ಇದು ವಕ್ಫ್ ಆಸ್ತಿ ಎಂದು ಆದೇಶವಾಗಿದೆ. ಸದ್ಯ ಈ ಆದೇಶದ ವಿರುದ್ದ ರೈತರು ಹೈಕೋರ್ಟ್‌ಗೆ ರಿಟ್ ಅರ್ಜಿ ಮೂಲಕ ಮೇಲ್ಮನವಿ ಸಲ್ಲಿಸಿಕೊಂಡಿದ್ದು ವಿಚಾರಣೆ ಬಾಕಿಯಿದೆ. ಹೈಕೋರ್ಟ್ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ರವೀಂದ್ರ ತಿಳಿಸಿದರು. ಆದ್ರೆ ಸದ್ಯ ಎರಡು ಕಡೆಯವರು ವಿವಾದಿತ ಜಾಗಕ್ಕೆ ಹೋಗದಂತೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಾಗಿದೆ ಅಂತ ಚಿಂತಾಮಣಿ ತಹಶೀಲ್ದಾರ್ ಸುದರ್ಶನ್ ತಿಳಿಸಿದ್ದಾರೆ.