Kodagu | ದೇವಾಲಯಕ್ಕೂ ಹಬ್ಬಿದ ವಕ್ಫ್‌ ಭೂತ – ವನದುರ್ಗ, ಗುಳಿಗ ದೈವಾರಾಧನೆ ನಡೆಯುವ 11 ಎಕ್ರೆ ಜಾಗ ವಕ್ಫ್‌ ಆಸ್ತಿ!

Public TV
2 Min Read
Madikeri Waqf 2 1

ಮಡಿಕೇರಿ: ವಿಜಯಪುರದಿಂದ ಆರಂಭವಾದ ವಕ್ಫ್ ಬೋರ್ಡ್‌ನ (Waqf Board) ರಾದ್ಧಾಂತ ಇದೀಗ ರಾಜ್ಯಾದ್ಯಂತ ಹಬ್ಬಿದೆ. ರೈತರ ಜಮೀನಾಯ್ತು, ಮನೆಗಳಾಯ್ತು, ಈಗ ನೂರಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿರುವ ದೇವಸ್ಥಾನ (Kodagu Temple) ಜಾಗದ ಮೇಲೂ ವಕ್ಫ್‌ ವಕ್ರದೃಷ್ಟಿ ನೆಟ್ಟಿದೆ. ದೇವಾಲಯದ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

Madikeri Waqf 4 1

ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ಹೃದಯ ಭಾಗದಲ್ಲಿ ವನದುರ್ಗಾ ದೇವಾಲಯದ (Vanadurgha Temple) ಟ್ರಸ್ಟ್‌ನ ಸುಮಾರು 11 ಎಕರೆ ಜಾಗ‌ದ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ಉಲ್ಲೇಖವಾಗಿದೆ. ನೂರಾರು ವರ್ಷಗಳಿಂದ ಪೂರ್ವಜರು ಇಲ್ಲಿ ವನದುರ್ಗಾ ಚೌಡೇಶ್ವರಿ ಹಾಗೂ ಗುಳಿಗ ದೈವಗಳ ಆರಾಧಾನೆ ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಹ್ಯಾರಿಸ್‌ಗೆ ರಾಹುಲ್‌ ಗಾಂಧಿ ಪತ್ರ

Madikeri Waqf 3 1

10 ವರ್ಷಗಳ ಹಿಂದೆ ದೇವಸ್ಥಾನದ 11 ಎಕರೆ ಜಾಗದ ಆರ್‌ಟಿಸಿಯಲ್ಲಿ ಸಂಗಮನಾಥ್ ಪಟೇಲ್ ಪೂವಯ್ಯ, ಅಬ್ದುಲ್ ಗನಿ, ಮಹಮ್ಮದ್ ಇಬ್ರಾಹಿಂ, ಟ್ರಸ್ಟಿ ಎಂದು ನಮೂದಾಗಿತ್ತು. ಆದರೀಗ ಜುಮ್ಮ ಮಸೀದಿ, ಸುನ್ನಿ ನಗರೂರು ಮತ್ತು ವಕ್ಪ್ ಆಸ್ತಿ ಎಂದು ಉಲ್ಲೇಖವಾಗಿದೆ. ಇದರಿಂದ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಕೇಸ್‌ – ವಿವಿ ಯಾರು ಸ್ಥಾಪಿಸಿದ್ರು ಅನ್ನೋದರ ಮೇಲೆ ನಿರ್ಧರಿಸಲಾಗುತ್ತೆ: ಸುಪ್ರೀಂ

Madikeri Waqf 1

ಇದು ಹಿಂದೂಗಳ ದೇವಾಲಯ ಅನ್ನೋದಕ್ಕೆ ನೂರಾರು ವರ್ಷಗಳ ಹಿಂದೆ ಹಳೆಗನ್ನಡದಲ್ಲಿ ಬರೆದಿರುವ ಚೌಡೇಶ್ವರಿ ದೇವಾಲಯದ ಕಲ್ಲು ಸಹ ಸಾಕ್ಷಿಯಿದೆ. ಪ್ರತಿ ವರ್ಷ ಈ ದೇವಾಲಯದಲ್ಲಿ ವಾರ್ಷಿಕೋತ್ಸವ, ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ದೇವಾಲಯದೊಂದಿಗೆ ಭಕ್ತರಿಗೆ ಭಾವನ್ಮಾಕ ಸಂಬಂಧ ಇದೆ. ಈ ನಡುವೆ ವಕ್ಫ್‌ ಆಸ್ತಿ ವಿವಾದ ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದೆ. ರಾಜ್ಯ ಸರ್ಕಾರ ಎಚ್ಚೆತ್ತು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ನಿನ್ನೆಯಷ್ಟೇ ರಾಜ್ಯದ ಕೆಲ ರೈತರಿಗೆ ನೀಡಿದ್ದ ನೋಟಿಸ್‌ ಅನ್ನು ಕಂದಾಯ ಇಲಾಖೆ ವಾಪಸ್‌ ಪಡೆದಿರುವುದಾಗಿ ಹೇಳಿದೆ. ಈ ಬೆನ್ನಲ್ಲೇ ಹಿಂದೂ ದೇವಾಲಯದ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದು ಜನರಲ್ಲಿ ಆಕ್ರೋಶ ತರಿಸಿದೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರೋ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ಗಳು ಜಪ್ತಿ 

Share This Article