ಹಾಸನ: ಸರ್ಕಾರಿ ಜಾಗದಲ್ಲಿದ್ದ ಕೆರೆಯನ್ನು ನುಂಗಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದಲ್ಲಿ ನಡೆದಿದೆ.
ನೂರಾರು ವರ್ಷಗಳಿಂದ ಅರಕಲಗೂಡು ಪಟ್ಟಣದಲ್ಲಿರುವ ಗೌರಿಕಟ್ಟೆಗೆ (ಗೌರಿಕೆರೆ) ಸೇರಿದ 4 ಎಕರೆ 10 ಗುಂಟೆ ಜಾಗ ಇದೀಗ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ಪಹಣಿಯಲ್ಲಿ ಉಲ್ಲೇಖವಾಗಿದೆ. ಅರಕಲಗೂಡು ಪಟ್ಟಣದಲ್ಲೇ ಕೆರೆ ಇದ್ದು ಸದ್ಯ ದುಬಾರಿ ಬೆಲೆ ಬಾಳುತ್ತದೆ. ಕೆರೆಯ ಜಾಗ ಕೆಲವರು ಉಳಿಸಲು ಕೋರ್ಟ್ ಮೆಟ್ಟಿಲೇರಿದ್ದು, ಇದರ ನಡುವೆ 4 ಎಕರೆ 10 ಗುಂಟೆ ಕೆರೆಯ ಜಾಗ ವಕ್ಫ್ ಬೋರ್ಡ್ ಎಂದು ಪಹಣಿಯಲ್ಲಿ ನಮೂದಾಗಿದೆ.
Advertisement
ನೀರಿನ ಮೂಲವಿಲ್ಲದೆ ಕೆರೆ ಬರಿದಾಗಿದ್ದು, ಗಿಡ ಗಂಟೆಗಳು ಬೆಳೆದಿವೆ. ಹಲವಾರು ವರ್ಷಗಳಿಂದ ಹದಿನೆಂಟು ಸಮುದಾಯದವರು ಈ ಕೆರೆಯಲ್ಲಿ ಗೌರಿಯನ್ನು ಕೂರಿಸಿ ಪೂಜೆ ಸಲ್ಲಿಸಿಸುತ್ತಿದ್ದರು. ಆದರೆ ನೀರಿಲ್ಲದ ಕಾರಣ ಕೆರೆ ಪಾಳುಬಿದ್ದಿದೆ. ವಕ್ಫ್ ಬೋರ್ಡ್ ಹೆಸರಿಗೆ ಕೆರೆ ಜಾಗ ಸೇರಿರುವುದು ಕೇಳಿ ಪಟ್ಟಣದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಪಹಣಿಯಲ್ಲಿ ಹಿಂದಿನಂತೆ ಸರ್ಕಾರಿ ಕೆರೆಯ ಜಾಗ ಎಂದು ಉಲ್ಲೇಖವಾಗಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
Advertisement