– ಶಾಲೆ ಆವರಣದಲ್ಲೇ ತಲೆ ಎತ್ತಿದ ದರ್ಗಾ
ಚಿಕ್ಕಬಳ್ಳಾಪುರ: ಸರ್ ಎಂ.ವಿಶ್ವೇಶ್ವರಯ್ಯ ಅವರು ವ್ಯಾಸಂಗ ಮಾಡಿದ್ದ ಸರ್ಕಾರಿ ಶಾಲೆಯನ್ನೂ ವಕ್ಫ್ ಹೆಸರಿಗೆ ಪರಭಾರೆ ಮಾಡಿರುವ ಪ್ರಸಂಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್ ಸ್ವತ್ತು ಎಂದು ಬದಲಾವಣೆ ಮಾಡಲಾಗಿದೆ.
2015-16 ರಲ್ಲಿ ಪಹಣಿಯಲ್ಲಿ ಸ್ಕೂಲು ಬದಲು ವಕ್ಫ್ ಸ್ವತ್ತು ಎಂದು ನಮೂದಾಗಿದೆ. ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಗ್ರಾಮಸ್ಥರು ಶಿಕ್ಷಕರು ನಿರಂತರ ಹೋರಾಟ ನಡೆಸಿದ್ದಾರೆ.
ಕೆಲ ವರ್ಷಗಳ ಹಿಂದೆ ಶಾಲಾ ಆವರಣದಲ್ಲಿ ದರ್ಗಾ ತಲೆ ಎತ್ತಿದೆ. ಗ್ರಾಮಸ್ಥರು ಸರ್ಕಾರಿ ಶಾಲೆ ಉಳಿವಿಗಾಗಿ ಕಾನೂನು ಮೊರೆ ಹೋಗಿದ್ದಾರೆ.