ಬಳ್ಳಾರಿ: ವಕ್ಫ್ ಆಸ್ತಿ ವಿವಾದ (Waqf Land Row) ಇದೀಗ ಬಳ್ಳಾರಿಗೂ (Ballari) ಹಬ್ಬಿದೆ. ಬಳ್ಳಾರಿ (Ballari) ತಾಲೂಕಿನ ಬೊಮ್ಮನಹಾಳ ಗ್ರಾಮದ 10ಕ್ಕೂ ಅಧಿಕ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ.
ಹೇಮರೆಡ್ಡಿ, ಸಿದ್ದುಗೌಡ ಸೇರಿದಂತೆ ಹತ್ತಕ್ಕೂ ಹೆಚ್ಚು ರೈತರಿಗೆ ವಕ್ಫ್ ನೋಟಿಸ್ (Waqf Notice) ಬಂದಿದೆ. ಸದ್ಯ ನೋಟಿಸ್ ಬಂದಿರುವ ರೈತರ ಜಮೀನುಗಳು ಎರಡು ತಲೆಮಾರುಗಳಿಂದ ಒಂದೇ ಕುಟುಂಬಕ್ಕೆ ಸೇರಿದೆ. ಇದನ್ನೂ ಓದಿ: ಕಾಂಗ್ರೆಸ್ ಅಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ: ತೇಜಸ್ವಿ ಸೂರ್ಯ
ಪಿತ್ರಾರ್ಜಿತ ಜಮೀನುಗಳಿಗೂ ನೋಟಿಸ್ ಬಂದಿರುವ ಕಾರಣ ರೈತರು ಬೆಂಗಳೂರಿನಲ್ಲಿರುವ ವಕ್ಫ್ ಇಲಾಖೆಗೆ ಹೋಗಿ ಬಂದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ರೈತರು ಎಲ್ಲಿ ನಮ್ಮ ಜಮೀನು ಏನಾಗಬಹುದು ಎಂಬ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!
ಬೊಮ್ಮನಹಾಳ ಗ್ರಾಮದ 13 ಎಕರೆ ಜಮೀನಿಗೆ ವಕ್ಪ್ ಬೋರ್ಡ್ 2023ರ ಆಗಸ್ಟ್‌ನಲ್ಲಿ ನೋಟಿಸ್ ನೀಡಿದೆ. ವಕ್ಪ್ ನೋಟಿಸ್ ನೋಡಿ ರೈತರು ಕಂಗಾಲಾಗಿದ್ದಾರೆ. ಪಿತ್ರಾರ್ಜಿತ ಆಸ್ತಿಗೆ ಈ ರೀತಿ ನೋಟಿಸ್ ನೀಡಿದರೆ ಹೇಗೆ? ನಮ್ಮ ಆಸ್ತಿಗಾಗಿ ನಾವು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿ ಆಗಿರುವ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.