ನವದೆಹಲಿ: “ದೇಶದ ವಕ್ಫ್ ಬೋರ್ಡ್‌ಗಳಿಂದ (Waqf Board) ಕನಿಷ್ಟ ವರ್ಷಕ್ಕೆ 12 ಸಾವಿರ ಕೋಟಿ ರೂ. ಆದಾಯ ಸಿಗಬೇಕು. ಆದರೆ ವಕ್ಫ್‌ನಿಂದ ಸಿಕ್ಕಿದ್ದು ಕೇವಲ 166 ಕೋಟಿ ರೂ. ಆದಾಯ”
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Waqf Bill) ಮಂಡಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು (Kiren Rijiju) ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
2004 ರ ಹೊತ್ತಿಗೆ ವಕ್ಫ್ ಬಳಿ ಒಟ್ಟು 4.9 ಲಕ್ಷ ರೂ. ಮೌಲ್ಯದ ಆಸ್ತಿ ಇತ್ತು ಮತ್ತು ಆದಾಯ ಕೇವಲ 163 ಕೋಟಿ ರೂ.ಗಳಷ್ಟಿತ್ತು. ಆದರೆ 2013 ರ ತಿದ್ದುಪಡಿಯ ನಂತರ ಆದಾಯವು 166 ಕೋಟಿ ರೂ.ಗೆ ಏರಿಕೆಯಾಯಿತು. ಕೇವಲ 3 ಕೋಟಿ ಮಾತ್ರ ಏರಿಕೆ ಹೇಗಾಯ್ತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ
Watch: Union Minister Kiren Rijiju says, “On our own WAMSI portal, we have reviewed the records. The Sachar Committee, which was formed in 2006, has also provided detailed information on this matter. In 2006, there were 4.9 lakh Waqf properties, and do you know what the total… pic.twitter.com/bclDQLBTOp
— IANS (@ians_india) April 2, 2025
ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ ಇರುವ ವಕ್ಫ್‌ನಿಂದ ಅಲ್ಪ ಆದಾಯವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಆದಾಯ ಕನಿಷ್ಠವಾದರೂ 12 ಸಾವಿರ ಕೋಟಿ ರೂ.ಗಳಾಗಿರಬೇಕು. ವಕ್ಫ್ ಆಸ್ತಿಯ ಲಾಭ ಬಡ ಮುಸ್ಲಿಮರಿಗೆ ಆಗಬೇಕು. ಈ ಉದ್ದೇಶ ಈಡೇರಿಕೆಗೆ ವಕ್ಫ್ ಮಸೂದೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಈ ಸಂಸತ್ತನ್ನೇ ಕಾಂಗ್ರೆಸ್ ವಕ್ಫ್‌ಗೆ ನೀಡ್ತಿತ್ತು: ಕಿರಣ್ ರಿಜಿಜು
ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಸಿಕೊಂಡರೆ ವರ್ಷಕ್ಕೆ 12,000 ಕೋಟಿ ರೂ. ಆದಾಯ ಗಳಿಸಬಹುದು ಎಂದು ಸಾಚಾರ್ ಸಮಿತಿ ಹೇಳಿತ್ತು. 2006 ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ ಸಾಚಾರ್ ಸಮಿತಿಯು, ಈ ಆಸ್ತಿಗಳನ್ನು ಸಮರ್ಥ ಮತ್ತು ಮಾರುಕಟ್ಟೆ ಬಳಕೆಗೆ ಒಳಪಡಿಸಿ ಕನಿಷ್ಟ 10% ರಷ್ಟು ಬಳಕೆ ಮಾಡಿದರೆ ವರ್ಷಕ್ಕೆ ಸುಮಾರು 12,000 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಬಹುದು ಎಂದು ಉಲ್ಲೇಖಿಸಿತ್ತು.
Watch: BJP MP Anurag Thakur says, “…Look at this report—it clearly names several Congress leaders in the Karnataka Assembly who were involved in misusing Waqf properties and committing scams worth thousands of crores. This is why you don’t want transparency; this is why you… pic.twitter.com/vpFCmM5Rmw
— IANS (@ians_india) April 2, 2025
ವಕ್ಫ್ ಆಸ್ತಿ ಎಷ್ಟಿದೆ?
ಸರ್ಕಾರಿ ಮಾಹಿತಿಯ ಪ್ರಕಾರ, ವಕ್ಫ್ ಮಂಡಳಿಗಳು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ 8.7 ಲಕ್ಷ ಆಸ್ತಿಗಳ ನಿಯಂತ್ರಣ ಹೊಂದಿದೆ. ಈ ಎಲ್ಲಾ ಆಸ್ತಿಗಳ ಮೌಲ್ಯ 1.2 ಲಕ್ಷ ಕೋಟಿ ರೂ. ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಯ ನಂತರ, ವಕ್ಫ್ ಮಂಡಳಿಯು ಭಾರತದಲ್ಲಿ ಅತಿಹೆಚ್ಚು ಭೂಮಿಯನ್ನು ಹೊಂದಿದ ಸಂಸ್ಥೆಯಾಗಿದೆ.
ವಕ್ಫ್ ಮಂಡಳಿಯ ಅಡಿಯಲ್ಲಿ 8,72,328 ಸ್ಥಿರ ಮತ್ತು 16,713 ಚರ ಆಸ್ತಿಗಳನ್ನು ನೋಂದಣಿ ಮಾಡಲಾಗಿದೆ. ವಕ್ಫ್ ಮಂಡಳಿಯ ಅಡಿಯಲ್ಲಿ 3,56, 051 ವಕ್ಫ್ ಎಸ್ಟೇಟ್‌ಗಳು ನೋಂದಾಯಿಸಲ್ಪಟ್ಟಿದೆ. ಅತಿ ಹೆಚ್ಚು ವಕ್ಫ್ ಆಸ್ತಿ ಇರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ (2,32,547) ಮೊದಲ ಸ್ಥಾನದಲ್ಲಿದ್ದರೆ ಪಶ್ಚಿಮ ಬಂಗಾಳ (80,480) ಎರಡನೇ ಸ್ಥಾನ ಹೊಂದಿದೆ.