ಬಾಲಿವುಡ್ (Bollywood) ಸ್ಟಾರ್ ನಟ ಸಲ್ಮಾನ್ ಖಾನ್ ಅವರು ತಂದೆಯಾಗುವ ಆಸೆ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದ ಸೋಲಿನ ನಂತರ ಸಂದರ್ಶನವೊಂದರಲ್ಲಿ ತಾನು ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದೆ ಎಂದು ನಟ ಮಾತನಾಡಿದ್ದಾರೆ.
ಇತ್ತೀಚಿಗೆ ಸಲ್ಮಾನ್ ಖಾನ್ (Salman Khan) ನಟಿಸಿರುವ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡೋದ್ರಲ್ಲಿ ಸೋತಿದೆ. ಆದರೆ ಸಲ್ಮಾನ್ ಖಾನ್ಗೆ ಇರುವ ಬೇಡಿಕೆ ಮಾತ್ರ ಕಮ್ಮಿಯಾಗಿಲ್ಲ. ಒಂದಲ್ಲಾ ಒಂದು ವಿಭಿನ್ನ ಪ್ರಯತ್ನಗಳ ಮೂಲಕ ಸಲ್ಲು ಬರುತ್ತಾರೆ.
ಇದೀಗ ಸಂದರ್ಶನವೊಂದರಲ್ಲಿ ತಂದೆಯಾಗುವ ಆಸೆ ಬಗ್ಗೆ, ಲವ್ ಲೈಫ್ (Love Life) ಬಗ್ಗೆ ಸಲ್ಮಾನ್ ಖಾನ್ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸಲ್ಮಾನ್ಗೆ ಮಕ್ಕಳೆಂದರೆ ತುಂಬಾ ಇಷ್ಟ. ಸಹೋದರ- ಸಹೋದರಿಯ ಮಕ್ಕಳ ಜೊತೆ ಫನ್ ಮಾಡುತ್ತಾರೆ. ಸಮಯ ಕಳೆಯುತ್ತಾರೆ. ಇದೀಗ ತಾವು ಮಗುವನ್ನು ಪಡೆಯುವ ಬಗ್ಗೆ ಯೋಚಿಸಿದ್ದೆ, ಮಕ್ಕಳು ಪಡೆಯಬೇಕು ಎಂಬುದು ನನ್ನಾಸೆಯಾಗಿತ್ತು. ಆದರೆ ಭಾರತದ ಕಾನೂನಿನ ಪ್ರಕಾರ ಅದು ಸಾಧ್ಯವಿಲ್ಲ. ಈಗ ಆ ಕಾನೂನು ಬದಲಾಗಿರಬಹುದು. ನನಗೆ ಮಕ್ಕಳೆಂದರೆ ಇಷ್ಟ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ನಾನು ಲವ್ ಮಾಡಿದವ್ರೆಲ್ಲಾ ನನ್ನ ಅಣ್ಣ ಅಂತಾರೆ. ‘ಲವ್ನಲ್ಲಿ ನನಗೆ ಲಕ್ ಇಲ್ಲʼ ಎಂದು ಲವ್ ಲೈಫ್ ಬಗ್ಗೆ ಸಲ್ಮಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.