ನವದೆಹಲಿ: ರಕ್ಷಾ ಬಂಧನದ ದಿನ ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಉಡುಗೊರೆ ನೀಡಲು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಕಳ್ಳನೊಬ್ಬ ತನ್ನನ್ನು ದರೋಡೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದಾನೆ ಎಂದು ಸುರೇಂದ್ರ ಎಂಬವರು ದೂರು ಕೊಟ್ಟಿದ್ದರು. ತಪ್ಪಿಸಿಕೊಂಡ. ಆದರೆ ಈ ವೇಳೆ ಆತನ ಬಿದ್ದ ನನಗೆ ಸಿಕ್ತು ಎಂದು ಸುರೇಂದ್ರ ಅವರು ಸುಲ್ತಾನ್‌ಪುರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಸಮೀರ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಪೆನ್ಸಿಲ್ ಬೆಲೆ ಏರಿಕೆಯಿಂದ ನನಗೆ ಕಷ್ಟ ಆಗುತ್ತಿದೆ – ಮೋದಿಗೆ 6ರ ಬಾಲಕಿ ಪತ್ರ
ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮೊಬೈಲ್ ಬಳಸಿದ್ದಾರೆ. ಆತನನ್ನು ರೋಹಿಣಿ ನಿವಾಸಿ 21 ವರ್ಷದ ತರುಣ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ಆತನಿಂದ ಕದ್ದ ಬೈಕ್ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯ್ ವಿಹಾರ್‌ನಿಂದ ದ್ವಿಚಕ್ರ ವಾಹನವನ್ನು ಕದ್ದಿದ್ದೇನೆ. ರಾಖಿ ಕಟ್ಟಿದ ಸಹೋದರಿಗೆ ಉಡುಗೊರೆ ನೀಡಲು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಕಳ್ಳತನ ಮಾಡುತ್ತಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಇದನ್ನೂ ಓದಿ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು
ಆರೋಪಿ ವಿಚಾರಣೆಯು ಆರು ಕಳ್ಳತನ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದೆ. ಆತ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆ ಬಿಟ್ಟು, ವ್ಯಸನಿಯಾಗಿದ್ದ. ಈತನ ವಿರುದ್ಧ 10 ಪೊಲೀಸ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.