ನವದೆಹಲಿ: 2005ರಿಂದ ಕಣ್ತಪ್ಪಿಸಿ ಓಡಾಡುತ್ತಿದ್ದ ಜೈಷ್-ಈ-ಮೊಹಮದ್ ಉಗ್ರ ಸಂಘಟನೆಯ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಬಂಧಿಸಿದೆ.
ಫಯಾಜ್ ಅಹ್ಮದ್ ಲೋನ್ ಬಂಧಿತ ಉಗ್ರ. 2005ರಿಂದಲೂ ಈ ಉಗ್ರನಿಗಾಗಿ ದೆಹಲಿ ಪೊಲೀಸರು ಬಲೆ ಬೀಸಿದ್ದರು. ಆದ್ರೆ ಈತ ಮಾತ್ರ ಪೊಲೀಸರ ಕಣ್ತಪ್ಪಿಸಿ ನಾಪತ್ತೆಯಾಗಿದ್ದ. ಆದರಿಂದ ಈತನನ್ನು ಹುಡುಕಿ ಕೊಟ್ಟವರಿಗೆ ಪೊಲೀಸ್ ಇಲಾಖೆಯಿಂದ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು.
Advertisement
A wanted terrorist of Jaish-e-Mohammad, Faiyaz Ahmed Lone, has been arrested from Srinagar, J&K by Special Cell, Delhi. He was carrying a reward of Rs 2 Lakh on his head,announced by Delhi police. Non-bailable warrant had been issued against him. He was evading arrest since 2015. pic.twitter.com/eADM1Pcn0m
— ANI (@ANI) April 1, 2019
Advertisement
ಈಗಾಗಲೇ ಫಯಾಜ್ ಅಹ್ಮದ್ ಲೋನ್ ವಿರುದ್ಧ ಜಾಮೀನುರಹಿತ ವಾರೆಂಟ್ ಅನ್ನು ಪೊಲೀಸರು ನೀಡಿದ್ದಾರೆ. ಈ ಹಿಂದೆ ಮಾರ್ಚ್ 21ರಂದು ಪುಲ್ವಾಮಾ ದಾಳಿಯ ಮುಖ್ಯ ಆರೋಪಿ ಮುದಸೀರ್ ಅಹ್ಮದ್ ಖಾನ್ ಜೊತೆ ಕೈಜೊಡಿಸಿದ್ದ ಉಗ್ರ ಸಜ್ಜಿದ್ ಖಾನ್‍ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ದೆಹಲಿ ಕೆಂಪು ಕೋಟೆಯ ಪ್ರದೇಶದಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರು ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಿದ್ದಾರೆ.