ಯಾದಗಿರಿ: ಹನಿಟ್ರ‍್ಯಾಪ್‌ನ (Honey Trap) ಡೈರೆಕ್ಟರ್ ಮತ್ತು ಪ್ರೊಡ್ಯುಸರ್ ಯಾರು ಅಂತ ಗೊತ್ತಾಗಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಹೇಳಿದರು.
ಜಿಲ್ಲೆಯ ಮಹಲ್ ರೋಜಾದಲ್ಲಿ ಹನಿಟ್ರ‍್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಹನಿಟ್ರ‍್ಯಾಪ್ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಕೊಡಬೇಕು. ರಾಜ್ಯದಲ್ಲಿ ಒಂದು ಫ್ಯಾಷನ್, ಒಂದು ಟ್ರೆಂಡ್ ಸ್ಟಾರ್ಟ್ ಆಗಿದೆ. ಹನಿಟ್ರ‍್ಯಾಪ್ ಪ್ರಕರಣದಿಂದ ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ. ಯಾವುದೇ ಪಕ್ಷದವರಿದ್ದರೂ ಈ ರೀತಿ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗುತ್ತದೆ. ರಾಜಕೀಯದಲ್ಲಿ ಹಲವು ವರ್ಷಗಳಿಂದ ಜನರ ಪ್ರೀತಿಗಳಿಸಿ, ದೊಡ್ಡ ಮಟ್ಟಕ್ಕೆ ಮುಟ್ಟಿದ್ದೀವಿ. ಆದರೆ ಈ ರೀತಿಯ ಸಂದರ್ಭದಲ್ಲಿ ಹನಿಟ್ರ‍್ಯಾಪ್‌ನಿಂದ ಮನಸ್ಸಿಗೆ ನೋವು ಮಾಡುವ ಕೆಲಸ ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: Sikandar ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್ ಔಟ್- ಸಲ್ಮಾನ್ ಖಾನ್ ಫೈಟ್, ರೊಮ್ಯಾನ್ಸ್ ನೋಡಿ ಸೂಪರ್ ಎಂದ ಫ್ಯಾನ್ಸ್
ಯಾವುದೇ ಪಕ್ಷದವರು ಇರಲಿ ಸಿಬಿಐ ತನಿಖೆ ಮಾಡಬೇಕು. ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡಬೇಕು, ಅವರ ಮೇಲಿನ ವಿಶ್ವಾಸ ಉಳಿಸಬೇಕು. ಅದಕ್ಕಾಗಿ ಈ ಹನಿಟ್ರ‍್ಯಾಪ್‌ಗೆ ಕಡಿವಾಣ ಹಾಕಬೇಕು. ಸಿಬಿಐ ತನಿಖೆಯಾದರೆ ಇದರ ಹಿಂದೆ ಯಾರಿದ್ದಾರೆಂದು ಹೊರಗಡೆ ಬರುತ್ತದೆ. ಇದಕ್ಕಿಂತ ಮುಂಚೆ ಅನೇಕರಿಗೆ ಹನಿಟ್ರ‍್ಯಾಪ್ ಆಗಿದೆ. ಹಿಂದುಳಿದ ಜಾತಿಯ ವ್ಯಕ್ತಿಗಳಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಇದೀಗ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ‍್ಯಾಪ್ ಯತ್ನ ನಡೆದಿದೆ. ಪಕ್ಷಾತೀತಿವಾಗಿ ರಾಜಕಾರಣಿಗಳಿಗೆ ಈ ರೀತಿ ಆದರೆ ನೋವು ಉಂಟಾಗುತ್ತದೆ. ಇದಕ್ಕೆ ಯಾರು ಡೈರೆಕ್ಟರ್, ಯಾರು ಪ್ರೊಡ್ಯುಷರ್? ಈ ಹನಿಟ್ರ‍್ಯಾಪ್ ಫ್ಯಾಕ್ಟರಿಯನ್ನು ಯಾರು ಇಟ್ಟುಕೊಂಡಿದ್ದಾರೆ ಎನ್ನೋದು ಹೊರಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಇನ್ನೂ ಇದೇ ವೇಳೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ರಾಜೀನಾಮೆ ವಿಚಾರವಾಗಿ ಮಾತನಾಡಿ, ಸಭಾಪತಿಗಳಿಗೂ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗಿದೆ. ಇದರಿಂದ ಅವರಿಗೂ ತೊಂದರೆ ಆಗುತ್ತದೆ. 30-40 ವರ್ಷ ರಾಜಕಾರಣದಲ್ಲಿದ್ದು, ಸಭಾಪತಿಗಳಾಗಿರುತ್ತಾರೆ. ಹನಿಟ್ರ‍್ಯಾಪ್ ಬೇರೆ ಬೇರೆ ವಿಚಾರ ಬಂದಾಗ ಮುಜುಗರ ಆಗುತ್ತದೆ. ಹೊರಟ್ಟಿಯವರು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೂ ನೋವು ಆಗಬಾರದು ಅಂತಿದ್ರೆ ಸಿಬಿಐ ತನಿಖೆಗೆ ಕೊಡಬೇಕು. ರಾಜಕಾರಣಿಗಳ ಮೇಲೆ ಎಲ್ಲಾ ಅಸ್ತ್ರ ಉಪಯೋಗಿಸುತ್ತಾರೆ. ಇವತ್ತು ರಾಜಣ್ಣ, ಈ ಹಿಂದೆ ಎಷ್ಟು ಜನ ರಾಜಕಾರಣಿಗಳ ಮೇಲೆ ಹನಿಟ್ರ‍್ಯಾಪ್ ನಡೆದಿದೆ. ಪ್ರಾಮಾಣಿಕ ರಾಜಕಾರಣಿಗಳಿಗೆ ನೋವಾಗುತ್ತದೆ. ಇದರಿಂದಾಗಿ ಬಸವರಾಜ ಹೊರಟ್ಟಿ ಅವರಿಗೆ ನೋವಾಗಿ ರಾಜೀನಾಮೆ ಬಗ್ಗೆ ಮಾತಾಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: BCCIನಿಂದ ನಿರ್ಲಕ್ಷ್ಯಕ್ಕೀಡಾಗಿದ್ದ ಇಶಾನ್ ಕಿಶನ್‌ನಿಂದ ಬೌಂಡರಿ, ಸಿಕ್ಸರ್ ಸುರಿಮಳೆ – SRH ಪರ 45 ಬಾಲ್‌ಗೆ ಸೆಂಚುರಿ