ಗಾಂಧಿನಗರ: ಉತ್ತರ ಪ್ರದೇಶದ (Uttar Pradesh) ಪೊಲೀಸರು ನನ್ನನ್ನು ಕೋಲ್ಲಲು ಯೋಜಿಸಿದ್ದಾರೆ ಎಂದು ಗ್ಯಾಂಗ್‍ಸ್ಟರ್‌ನಿಂದ ಬದಲಾಗಿದ್ದ ರಾಜಕಾರಣಿ ಹಾಗೂ ಸಮಾಜವಾದ ಪಾರ್ಟಿಯ (Samajwadi Party) ಮಾಜಿ ಸಂಸದ ಅತಿಕ್ ಅಹಮ್ಮದ್ (Atiq Ahmed) ಆರೋಪಿಸಿದ್ದಾನೆ.
ಭಾನುವಾರ ಅವರನ್ನು ಗುಜರಾತಿನ ಸಬರಮತಿ (Sabarmati) ಜೈಲಿನಿಂದ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ಗೆ (Prayagraj) ಕರೆದೊಯ್ಯುವ ವೇಳೆ ಪತ್ರಕರ್ತರು, ನಿಮಗೆ ಜೀವ ಭಯವಿದೆಯೇ ಎಂದು ಕೇಳಿದ್ದಾರೆ. ಆದಕ್ಕೆ ಅತಿಕ್, ನ್ಯಾಯಾಲಯಕ್ಕೆ ಕರೆದೊಯ್ಯುವುದು ಪೊಲೀಸರು ನನ್ನನ್ನು ಕೊಲ್ಲಲು ಇರುವ ನೆಪವಾಗಿದೆ ಎಂದಿದ್ದಾನೆ. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್
ಮಾ.28 ರಂದು ಅಪಹರಣ ಪ್ರಕರಣದ ಆದೇಶ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಯಾಗ್‍ರಾಜ್‍ಗೆ ಕರೆದೊಯ್ಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019ರ ಏಪ್ರಿಲ್‍ನಲ್ಲಿ ಸುಪ್ರೀಂ ಕೊರ್ಟ್ ಅತೀಕ್‍ನನ್ನು ಉತ್ತರ ಪ್ರದೇಶದಿಂದ ಗುಜರಾತ್‍ಗೆ (Gujarat) ಸ್ಥಳಾಂತರಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಜೂ.2019ರಲ್ಲಿ ಸಬರಮತಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಇತ್ತೀಚಿನ ಉಮೇಶ್ ಪಾಲ್ ಹತ್ಯೆಯನ್ನೂ ಸೇರಿದಂತೆ ಆತನ ಮೇಲೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
2005ರ ಬಹುಜನ ಸಮಾಜ ಪಾರ್ಟಿಯ (Bahujan Samaj Party) ಶಾಸಕ ರಾಜುಪಾಲ್ (Raju Pal) ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಅವರನ್ನು ಫೆ.24 ರಂದು ಅತಿಕ್ ಅಹಮ್ಮದ್ ಗ್ಯಾಂಗ್ ಸದಸ್ಯರು ಗುಂಡಿಟ್ಟು ಹತ್ಯೆ ಮಾಡಿದ್ದರು.
ಇದೇ ತಿಂಗಳ ಆರಂಭದಲ್ಲಿ ಅತೀಕ್, ಉಮೇಶ್ ಪಾಲ್ ಹತ್ಯೆಯಲ್ಲಿ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಪೊಲೀಸರಿಂದ ನಕಲಿ ಎನ್‍ಕೌಂಟರ್ ಆಗುವ ಭಯವಿದೆ ಎಂದು ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಸಾವರ್ಕರ್‌ಗೆ ಅವಮಾನ ಮಾಡಿದ್ರೆ ಮೈತ್ರಿಯಲ್ಲಿ ಬಿರುಕು – ರಾಹುಲ್‍ಗೆ ಉದ್ಧವ್ ನೇರ ಎಚ್ಚರಿಕೆ