ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಇಂದ್ರೇಶ್ ಕುಮಾರ್ ಅವರು ಶನಿವಾರ ನವದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾಕ್ಕೆ (Nizamuddin Dargah) ಭೇಟಿ ನೀಡಿ, ದೀಪಾವಳಿಯ ಪೂರ್ವಭಾವಿಯಾಗಿ ದೇಗುಲದ ಆವರಣದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಿದರು.
ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗ, ಮುಸ್ಲಿಂ ರಾಷ್ಟ್ರೀಯ ಮಂಚ್ ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕರೆ ನೀಡಿತು. ಮುಸ್ಲಿಂ ರಾಷ್ಟ್ರೀಯ ಮಂಚ್ ಪೋಷಕ ಮತ್ತು ಹಿರಿಯ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಮಾತನಾಡಿ, ನಿಜಾಮುದ್ದೀನ್ ದರ್ಗಾ ಸಂಕೀರ್ಣದೊಳಗೆ ಮಣ್ಣಿನ ದೀಪಗಳನ್ನು ಬೆಳಗಿಸುವ ಕ್ರಮವು ಶಾಂತಿ, ಸಮೃದ್ಧಿ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಂತಿದ್ದ ರೈಲಿನೊಳಗೆ ನಮಾಜ್ – ಮತ್ತೆ ವಿವಾದ
ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ನಿನ್ನೆ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾ ತಲುಪಿದ್ದರು. ಸೂಫಿ ಸಂತರ ದರ್ಗಾಕ್ಕೆ ಪುಷ್ಪ ಹಾಗೂ ಚಾದರ್ ಅರ್ಪಿಸಿದರು.
ದೀಪಾವಳಿ ಹಬ್ಬವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಪ್ರತಿ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಭಾರತವು ತೀರ್ಥಯಾತ್ರೆಗಳು, ಉತ್ಸವಗಳು ಮತ್ತು ಜಾತ್ರೆಗಳ ನಾಡು. ಎಲ್ಲರೂ ಬಡವರಿಗೆ ರೊಟ್ಟಿಯನ್ನು ನೀಡಿ ತಮ್ಮಲ್ಲಿ ಸಹೋದರತ್ವವನ್ನು ಹೆಚ್ಚಿಸುತ್ತಾರೆ. ಧರ್ಮಾಂಧತೆ, ದುಶ್ಚಟ, ದ್ವೇಷ, ಗಲಭೆ, ಯುದ್ಧ ಬೇಡ ಎಂಬುದನ್ನು ಪ್ರತಿ ಹಬ್ಬವೂ ಕಲಿಸುತ್ತದೆ. ನಾವು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಯಸುತ್ತೇವೆ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ 166 ಕ್ರಿಮಿನಲ್‌ಗಳ ಎನ್‌ಕೌಂಟರ್, 4453 ಮಂದಿಗೆ ಗಾಯ: ಯೋಗಿ ಆದಿತ್ಯನಾಥ್
ಯಾರನ್ನೂ ಬಲವಂತವಾಗಿ ಮತಾಂತರ ಮಾಡಿ ಹಿಂಸಾಚಾರ ಮಾಡಬಾರದು. ಪ್ರತಿಯೊಬ್ಬರೂ ಅವರವರ ಧರ್ಮ, ಜಾತಿಯನ್ನು ಅನುಸರಿಸಬೇಕು. ಅನ್ಯ ಧರ್ಮವನ್ನು ಟೀಕಿಸಿ ಅವಮಾನಿಸಬೇಡಿ. ದೇಶದಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಿದಾಗ, ಕಲ್ಲು ಹೊಡೆಯುವ ಮೂಲಭೂತವಾದಿಗಳಿಂದ ದೇಶ ಮುಕ್ತವಾಗುತ್ತದೆ. ಎಲ್ಲಾ ಧರ್ಮಗಳನ್ನು ಗೌರವಿಸುವ ಮತ್ತು ಸ್ವೀಕರಿಸುವ ಏಕೈಕ ದೇಶ ಭಾರತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ ಇಂದ್ರೇಶ್ ಕುಮಾರ್ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅವರೊಂದಿಗೆ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥರು ಆ ದಿನದ ಹಿಂದೆ ರಾಷ್ಟ್ರ ರಾಜಧಾನಿಯ ಮಸೀದಿ ಮತ್ತು ಮದರಸಾಗೆ ಭೇಟಿ ನೀಡಿದ್ದರು.