ಭಯೋತ್ಪಾದನೆಗೆ ಪ್ರಾಯೋಜಕತ್ವ ನಿಲ್ಲಿಸಿದ್ರೆ ಪಾಕ್‌ ಜೊತೆ ಮಾತುಕತೆಗೆ ಭಾರತ ಸಿದ್ಧ: ರಾಜನಾಥ್‌ ಸಿಂಗ್‌

Public TV
2 Min Read
Rajnath Singh

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದನೆಗೆ ಪ್ರಾಯೋಜಕತ್ವ ನಿಲ್ಲಿಸಿದ್ರೆ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲು ಭಾರತ ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ (J&K Poll) ಹಿನ್ನೆಲೆ ಇಲ್ಲಿನ ರಾಂಬನ್‌ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ ರಾಂಬನ್‌ ಜಿಲ್ಲೆಯ ಬನಿಹಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (BJP Candidate) ಮೊಹಮ್ಮದ್‌ ಸಲೀಂ ಭಟ್‌ ಪರ ಮತಯಾಚನೆ ನಡೆಸಿದರು. ಇದನ್ನೂ ಓದಿ: ಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಅಗತ್ಯ ಕ್ರಮ: ಬಾಂಗ್ಲಾ ಎಚ್ಚರಿಕೆ

BJP

ನಾವು ಯಾವುದೇ ಸಂದರ್ಭದಲ್ಲೂ ಭಯೋತ್ಪಾದಕ ಚಟುವಟಿಕೆಗಳನ್ನು ಭಾರತ ಒಪ್ಪಿಕೊಳ್ಳುವುದಿಲ್ಲ. ಕೆಲವರು ಪಾಕಿಸ್ತಾನದೊಂದಿಗೆ ಮಾತುಕತೆಯ ಬಗ್ಗೆ ಮಾತನಾಡುತ್ತಾರೆ. ನಾನು ಹೇಳುತ್ತೇನೆ, ಪಾಕಿಸ್ತಾನ ಒಂದು ಕೆಲಸ ಮಾಡಬೇಕು, ಭಯೋತ್ಪಾದನೆಯನ್ನು ಆಶ್ರಯಿಸುವುದನ್ನು ನಿಲ್ಲಿಸಬೇಕು. ನೆರೆಯ ರಾಷ್ಟ್ರದೊಂದಿಗೆ ಸಂಬಂಧವನ್ನು ಸುಧಾರಿಸಲು ಯಾರೂ ಬಯಸುವುದಿಲ್ಲ. ಏಕೆಂದರೆ ಅದರ ವಾಸ್ತವತೆ ನನಗೆ ತಿಳಿದಿದೆ. ನಾವು ಪಾಕಿಸ್ತಾನದೊಂದಿಗೆ ಸುಧಾರಿತ ಸಂಬಂಧ ಬಯಸುತ್ತೇವೆ. ಆದ್ರೆ ಅದಕ್ಕೂ ಮುನ್ನ ಅವರು ಭಯೋತ್ಪಾದನೆ ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್‌ ಪಿತ್ರೋಡಾ

ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಶೇ.85 ಜನ ಮುಸ್ಲಿಮರೇ ಆಗಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹಾಗೂ ದಾಳಿಗಳು ವಾಡಿಕೆಯಂತೆಯೇ ನಡೆಯುತ್ತಿದ್ದವು. ಇಂತಹ ಘಟನೆಗಳಲ್ಲಿ ಅತ್ಯಧಿಕ ಸಂಖ್ಯೆಯ ಮುಸ್ಲಿಮರು ಪ್ರಾಣ ಕಳೆದುಕೊಂಡಿದಾರೆ ಎಂಬುದು ನನಗೆ ಗೊತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 25 ವರ್ಷಗಳ ಬಳಿಕ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್‌ ತಪ್ಪೊಪ್ಪಿಗೆ!

ಪಾಕಿಸ್ತಾನದಲ್ಲಿ ಆಮೂಲಾಗ್ರ ಅಂಶಗಳ ಸಾಮಾನ್ಯೀಕರಣವು ಇಸ್ಲಾಮಾಬಾದ್‌ನ ರಾಜ್ಯ ನೀತಿಯ ಒಂದು ಭಾಗವಾಗಿದೆ. 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬೆಂಬಲಿತ ರಾಜಕೀಯ ಪಕ್ಷವೂ ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕ ಹಫೀಜ್ ಸಯೀದ್, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಸ್ಥಾಪಕ. ಆದ್ರೆ ಪಾಕಿಸ್ತಾನವನ್ನು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಗ್ರೇ ಲಿಸ್ಟ್‌ಗೆ ಸೇರಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿವೆ ಎಂದು ಸಿಂಗ್‌ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: 3 ವರ್ಷದ ಹಿಂದೆ ಸಾವಾಗಿ ಅಸ್ಥಿಪಂಜರ ಸಿಕ್ಕ ವ್ಯಕ್ತಿಯ ಪ್ರಕರಣಕ್ಕೆ ಟ್ವಿಸ್ಟ್ – ಈಗ ಕೊಲೆ ಆರೋಪ 

Share This Article