ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಎಎಪಿಯ (AAP) ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ (Priyanka Kakkar) ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್ ಅವರು ಜನರಿಗೆ ಅನುಕೂಲವಾಗುವ ಮಾದರಿಯನ್ನು ನೀಡಿದ್ದಾರೆ. ಅವರು ಪ್ರಧಾನಿ ಅಭ್ಯರ್ಥಿ ಆಗಬೇಕೆಂದು ನಾನು ಬಯಸುತ್ತೇನೆ. ಆದರೆ ನಿರ್ಧಾರ ನನ್ನ ಕೈಯಲ್ಲಿಲ್ಲ ಎಂದು ಹೇಳಿದ್ದಾರೆ.
ನಾಳೆಯಿಂದ ಎರಡು ದಿನಗಳ ಕಾಲ ಒಕ್ಕೂಟದ ಸಭೆ ನಡೆಯಲಿದ್ದು, ಪದಾಧಿಕಾರಿಗಳ ನೇಮಕವಾಗುವ ಸಾಧ್ಯತೆ ಇದೆ. ಇದೇ ವೇಳೆ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎನ್ನುವ ಚರ್ಚೆಯೂ ಶುರುವಾಗಿದ್ದು, ಈ ನಡುವೆ ಆಪ್ ನಾಯಕರು, ಅರವಿಂದ್ ಕೇಜ್ರಿವಾಲ್ ಇದಕ್ಕೆ ಅತ್ಯುತ್ತಮ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ INDIA ಒಕ್ಕೂಟದ 3ನೇ ಸಭೆ – ‘ಬಿಜೆಪಿ ಚಲೇ ಜಾವೋ’ ಅಭಿಯಾನಕ್ಕೆ ಚಾಲನೆ ನಿರೀಕ್ಷೆ
ಈ ಬಗ್ಗೆ ಮಾತನಾಡಿದ ಎಎಪಿಯ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್, ನಮ್ಮ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಪ್ರಸ್ತಾಪಿಸುತ್ತೇನೆ. ಕೇಜ್ರಿವಾಲ್ ಯಾವಾಗಲೂ “ಲಾಭ ಮತ್ತು ಜನಪರ” ಬಜೆಟ್ ಅನ್ನು ಮಂಡಿಸಿದ್ದಾರೆ. ಭಾರತ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಗೆ ಅವರು ಸೂಕ್ತ ವ್ಯಕ್ತಿ ಎಂದಿದ್ದಾರೆ.
ಕೇಜ್ರಿವಾಲ್ ಉಮೇದುವಾರಿಕೆ ಕುರಿತು ಮಾತನಾಡಿದ ಆಪ್‌ನ ದೆಹಲಿ ಸಂಚಾಲಕ ಗೋಪಾಲ್ ರೈ, ಪ್ರತಿಯೊಂದು ಪಕ್ಷಕ್ಕೂ ತಮ್ಮ ನಾಯಕ ಪ್ರಧಾನಿಯಾಗಬೇಕೆಂದು ಬಯಸುತ್ತದೆ. ಆಪ್ ಸದಸ್ಯರು ಕೂಡ ತಮ್ಮ ರಾಷ್ಟ್ರೀಯ ಸಂಚಾಲಕ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಎಎಪಿ ಕೇಜ್ರಿವಾಲ್ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸುತ್ತದೆಯೇ ಎಂದು ಕೇಳಿದಾಗ, “ಹೆಸರು ನೀಡುವಂತೆ ಏನೂ ಇಲ್ಲ. ನಾವು ಈಗಾಗಲೇ ಅದರ ಭಾಗವಾಗಿದ್ದೇವೆ ಮತ್ತು ಅರವಿಂದ್ ಕೇಜ್ರಿವಾಲ್ ಬಣದ ಭಾಗವಾಗಿದ್ದಾರೆ” ಎಂದು ಹೇಳಿದರು. ಇದನ್ನೂ ಓದಿ: ನಾವು ಯಾವತ್ತೂ ನಿಮಗೆ ಸುಳ್ಳು ಹೇಳಲ್ಲ, ಸುಳ್ಳು ಆಶ್ವಾಸನೆ ಕೊಡಲ್ಲ: ರಾಹುಲ್ ಗಾಂಧಿ
Web Stories