ನವದೆಹಲಿ: ನನ್ನ ತಂದೆಯ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು ಎಂದು ಪಾಕಿಸ್ತಾನದ ಸೈನಿಕರ ಪೈಶಾಚಿಕ ಕೃತ್ಯದಿಂದ ಹುತಾತ್ಮರಾದ ಯೋಧರೊಬ್ಬರ ಮಗಳು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
Advertisement
ಸೋಮವಾರದಂದು ಪಾಕಿಸ್ತಾನದ ಸೈನಿಕರು ಕಾಶ್ಮೀರದಲ್ಲಿ ಭಾರತದೊಳಗೆ ನುಗ್ಗಿ ಇಬ್ಬರು ಯೋಧರನ್ನು ಕೊಂದು ಅವರ ಶಿರಚ್ಛೇದನ ಮಾಡಿದ್ದರು. ಮೃತರಲ್ಲಿ ಬಿಎಸ್‍ಎಫ್ ಯೋಧ ಪ್ರೇಮ್ ಸಾಗರ ಕೂಡ ಒಬ್ಬರಾಗಿದ್ದು, ಅವರ ಮಗಳು ತನ್ನ ತಂದೆಯ ಬಲಿದಾನಕ್ಕೆ ಭಾರತ ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬುದನ್ನ ಈ ಮಾತುಗಳ ಮೂಲಕ ಹೇಳಿದ್ದಾರೆ.
Advertisement
Advertisement
ಪಾಕಿಸ್ತಾನಿ ಸೈನಿಕರ ಈ ಅಮಾನವೀಯ ಕೃತ್ಯಕ್ಕೆ ಹುತಾತ್ಮರಾದ ಮತ್ತೊಬ್ಬ ಯೋಧ ಪರಮ್‍ಜೀತ್ ಸಿಂಗ್ ಅವರ ಮೃತದೇಹವನ್ನು ಇಂದು ಪಂಜಾಬ್‍ನ ಸ್ವಗ್ರಾಮ ಟಾರ್ನ್ ಟರಾನ್‍ಗೆ ಕೊಂಡೊಯ್ಯಲಾಯ್ತು. ಆಕ್ರೋಶಗೊಂಡ ಪರಮ್‍ಜೀತ್ ಅವರ ಸಂಬಂಧಿಕರು, ನಾವು ಅವರ ಮುಖವನ್ನು ನೋಡುವವರೆಗೂ ದೇಹವನ್ನು ಅಂತ್ಯಕ್ರಿಯೆ ಮಾಡುವುದಿಲ್ಲ. ಯಾರ ದೇಹ ಇದು? ಬಾಕ್ಸ್‍ನೊಳಗೆ ಮುಚ್ಚಲಾಗಿದೆ ಎಂದು ರಾಷ್ಟ್ರಧ್ವಜವನ್ನು ಹೊದಿಸಿದ್ದ ಶವಪೆಟ್ಟಿಗೆಯನ್ನು ತೋರಿಸುತ್ತಾ ಹೇಳಿ ದುಃಖಿತರಾದ್ರು. ನಮಗೆ ದೇಹವನ್ನು ತೋರುಸುತ್ತಿಲ್ಲವಲ್ಲ ಯಾಕೆ? ಎಂದು ಪ್ರಶ್ನಿಸಿದ್ರು.
Advertisement
ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ಪೂಂಚ್ ಸೆಕ್ಟರ್‍ನ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಯೋಧರು ಎರಡು ಪೋಸ್ಟ್‍ಗಳ ನಡುವೆ ಗಸ್ತು ತಿರುಗುತ್ತಿದ್ದ ವೇಳೆ ಅವರ ಮೇಲೆ ಪಾಕಿಸ್ತಾನಿಗಳು ಮಾರ್ಟರ್ ಬಾಂಬ್‍ಗಳಿಂದ ದಾಳಿ ನೆಡೆಸಿದ್ದರು. ಈ ವೇಳೆ ಇಬ್ಬರು ಯೋಧರು ರಕ್ಷಣೆಗಾಗಿ ಓಡಿದ್ರು. ಇನ್ನುಳಿದ ಇಬ್ಬರ ಮೇಲೆ ಪಾಕಿಸ್ತಾನಿಗಳು ದಾಳಿ ಮಾಡಿ ಶಿರಚ್ಛೇದನ ಮಾಡಿದ್ದರು.