ಆಸ್ಟ್ರೇಲಿಯಾ: ನಡೆದಾಡುವ ಅಪರೂಪದ ಪಿಂಕ್ ಹ್ಯಾಂಡ್ ಫಿಶ್ 22 ವರ್ಷದ ಬಳಿಕ ಪತ್ತೆಯಾಗಿದೆ.
ಟಾಸ್ಮೇನಿಯನ್ ಕರಾವಳಿಯ ಬಳಿ ಆಸ್ಟ್ರೇಲಿಯಾದ ಕಾಮನ್‍ವೆಲ್ತ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‍ನ ಸಂಶೋಧಕರ ತಂಡ ಈ ಮೀನು ಪತ್ತೆ ಮಾಡಿದ್ದಾರೆ. ಈ ಅಪರೂಪದ ಮೀನು 1999ರಲ್ಲಿ ಒಮ್ಮೆ ಕಾಣಿಸಿಕೊಂಡಿತ್ತು. ಇದೀಗ ಕಾಣಿಸಿಕೊಂಡಿರುವ ಬಗ್ಗೆ ಸಂಶೋಧಕರ ತಂಡ ತಿಳಿಸಿದೆ.
Advertisement
Advertisement
ಸಂಶೋಧಕರ ತಂಡ ಟಾಸೈನ್ ಸಮುದ್ರದ ಒಳಗೆ ಕ್ಯಾಮೆರಾವನ್ನು ಇಟ್ಟಿದ್ದರು. 4 ಸಾವಿರ ಮೀಟರ್ ಅಡಿಯವರೆಗೆ ಕ್ಯಾಮೆರಾವನ್ನು ಇಳಿಬಿಟ್ಟಿದ್ದರು. ಒಂದು ವರ್ಷದ ನಂತರ ಕ್ಯಾಮೆರಾವನ್ನು ಹೊರತೆಗೆದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್ ಫಿಶ್ ನೋಡಿ ಸಂತಸಗೊಂಡಿದ್ದಾರೆ. ಗುಲಾಬಿ ಹ್ಯಾಂಡ್ ಫಿಶ್ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ.
Advertisement
ವೈರಲ್ ವೀಡಿಯೋದಲ್ಲಿ ಏನಿದೆ?: ಸಂಶೋಧಕರ ತಂಡ ಗುಲಾಬಿ ಹ್ಯಾಂಡ್ ಫಿಶ್ ಕಾಣಿಸಿಕೊಂಡ 35 ಸೆಕೆಂಡುಗಳ ವೀಡಿಯೋವನ್ನು ಅಧಿಕೃತ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮುದ್ರದ ತಳದಲ್ಲಿ ನಡೆದಾಡಲು ಪುಟ್ಟ ಕೈಗಳನ್ನು ಹೊಂದಿರುವ ಈ ಮೀನು, ತಿಳಿ ಗುಲಾಬಿ ಬಣ್ಣದಲ್ಲಿದ್ದು ನೋಡಲೂ ಆಕರ್ಷಕವಾಗಿದೆ. ತನ್ನ ಕೈಗಳ ಸಹಾಯದಿಂದ ಮುಂದೆ ಸಾಗುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ.