ದಾವಣಗೆರೆ: ಭ್ರಷ್ಟ ತುಘಲಕ್ ಸರ್ಕಾರದ ವಿರುದ್ಧ ಬಿಜೆಪಿ (BJP) ಹೋರಾಟ ನಡೆಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P. Renukacharya) ಹೇಳಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನಮ್ಮ ಹೋರಾಟ ಅಲ್ಪಸಂಖ್ಯಾತರ ವಿರುದ್ಧದ ಹೋರಾಟ ಅಲ್ಲ. ನಮ್ಮ ಹಕ್ಕುಗಳಿಗಾಗಿ, ನಮ್ಮ ರೈತರ, ಮಠ ಮಾನ್ಯಗಳ ಸರ್ಕಾರಿ ಜಮೀನುಗಳನ್ನು ಕಬಳಿಸಿದವರ ವಿರುದ್ಧದ ಹೋರಾಟವಾಗಿದೆ. ಜಮೀರ್ ಅಹಮ್ಮದ್ ಒಬ್ಬ ಮತಾಂದ. ವಸತಿ ಸಚಿವ ಎನ್ನುವುದು ಮರೆತು ಕಾನೂನು ಬಾಹಿರವಾಗಿ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ಸಿಎಂ ಸಿದ್ದರಾಮಯ್ಯನವರಿಗೆ ಕುರ್ಚಿ ಕಂಟಕ ಇದೆ. ಉಪ ಚುನಾವಣೆ ಮುಗಿದ ತಕ್ಷಣ ನಿಮ್ಮನ್ನು ನಿಮ್ಮವರೇ ಕುರ್ಚಿಯಿಂದ ಕೆಳಗೆ ಇಳಿಸುತ್ತಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಸಿಎಂ ಮೇಲೆ ಮುಡಾ ಹಗರಣದಲ್ಲಿ ಕಾನೂನು ತೂಗುಗತ್ತಿ ನೇತಾಡುತ್ತಿದೆ ಎಂದು ಎಚ್ಚರಿಸಿದ್ದಾರೆ.
Advertisement
Advertisement
ರೈತರಿಗೆ ಪರಿಹಾರ ಬಿಡುಗಡೆ ಮಾಡಿಲ್ಲ. ಆದರೆ ವಕ್ಫ್ ಆಸ್ತಿ (Walkf land row) ರಕ್ಷಣೆಗೆ 35,000 ಕೋಟಿ ರೂ. ಹಣ ಬಿಡುಗಡೆ ಮಾಡುತ್ತೀರಿ. ಐದು ಗ್ಯಾರಟಿಗಳಂತೆ, ಆರನೇ ಗ್ಯಾರೆಂಟಿ ವಕ್ಫ್ ಬೋರ್ಡ್ ಆಸ್ತಿಯನ್ನು ಉಳಿಸೋದಾ ಎಂದು ಅವರು ಪ್ರಶ್ನಿಸಿದ್ದಾರೆ.