ಬೆಂಗಳೂರು: ಗಂಡನ ಚಿತ್ರ ವಿಚಿತ್ರ ಹಿಂಸೆ ತಾಳಲಾರದೆ ಪತ್ನಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಾಗಂತ ಈ ಪತಿರಾಯ ಪ್ರತಿದಿನ ಕುಡಿದು ಬಂದು ಹೆಂಡ್ತಿಯನ್ನ ಹೊಡೆಯುತ್ತಾರೆ ಅಥವಾ ವರದಕ್ಷಿಣೆಗಾಗಿ ಕಿರುಕುಳ ನೀಡ್ತಿದ್ದಾರೆ ಅಂದ್ಕೋಬೇಡಿ. ಅವರು ಅದ್ಯಾವುದನ್ನೂ ಮಾಡಿಲ್ಲ. ಆದ್ರೆ ಪತಿಯ ಅತಿಯಾದ ಸಂಪ್ರದಾಯ ಪಾಲನೆಯಿಂದ ಹೆಂಡತಿ ಬೇಸತ್ತಿದ್ದಾರೆ.
Advertisement
ಪತಿಯ ಷರತ್ತು ಏನೆಂದರೆ ಹೆಂಡತಿ ಬೆಳಿಗ್ಗೆ 4.30ಕ್ಕೆ ಏಳಬೇಕು. ಸೂರ್ಯ ನಮಸ್ಕಾರ ಮಡ್ಬೇಕು. ಸ್ನಾನ, ಪೂಜೆ ಮಾಡಿದ ನಂತರವೇ ತಿಂಡಿ ತಿನ್ನಬೇಕು. ಇದರಿಂದ ಬೇಸತ್ತ ಪತ್ನಿ ಈಗ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.
Advertisement
ನಾನೊಬ್ಬ ಉದ್ಯೋಗಸ್ಥ ಮಹಿಳೆ. ಬೆಳಗ್ಗಿನಿಂದ ಸಂಜೆವರೆಗೆ ಆಫೀಸ್‍ನಲ್ಲಿ ದುಡಿಯುತ್ತೇನೆ. ಮತ್ತೆ ಮನೆ ಕೆಲಸ ಮುಗಿಸಿ ರಾತ್ರಿ ಲೇಟಾಗಿ ಮಲಗುತ್ತೇನೆ. ಹೀಗಿದ್ರೂ ಬೆಳಗ್ಗೆ ಬೇಗ ಏಳುವಂತೆ ನನ್ನ ಗಂಡ ಒತ್ತಾಯ ಮಾಡ್ತಾರೆ. ಇದ್ರಿಂದ ನನಗೆ ಸರಿಯಾಗಿ ನಿದ್ದೆ ಮಾಡೋಕೆ ಆಗ್ತಿಲ್ಲ. ಇಷ್ಟೇ ಅಲ್ಲ ಬೆಳಿಗ್ಗೆ ಎದ್ದ ನಂತರ ಸೂರ್ಯ ನಮಸ್ಕಾರ ಮಾಡ್ಬೇಕು. ಮಡಿಯುಟ್ಟು ಅಡುಗೆ ಮಾಡ್ಬೇಕು ಅಂತಾರೆ. ಇದರಿಂದ ನಾನು ದೈಹಿಕ ಹಾಗೂ ಮಾನಸಿಕವಾಗಿ ಬಳಲಿದ್ದೇನೆ. ನನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಪತ್ನಿ ಆರೋಪಿಸಿದ್ದಾರೆ.
Advertisement
ಪತಿ ಪತ್ನಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಎಂಜಿನಿಯರ್‍ಗಳಾಗಿದ್ದು 2014ರಲ್ಲಿ ಮದುವೆಯಾಗಿದ್ದಾರೆ. ಹುಡುಗ ಸಂಪ್ರದಾಯಸ್ಥ ಕುಟುಂಬದವನೆಂದು ಮನೆಯವರು ಒಪ್ಪಿ ಮದುವೆ ಮಾಡಿಸಿದ್ದರು. ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ಗಂಡ ಹಂಡತಿ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಹೆಂಡತಿ ಬೆಳಿಗ್ಗೆ ಬೇಗನೆ ಏಳುವುದಿಲ್ಲ, ಸೂರ್ಯ ನಮಸ್ಕಾರ, ಯೋಗ ಮಾಡಲ್ಲ. ಸಂಪ್ರದಾಯ ಪಾಲಿಸಲ್ಲ ಅನ್ನೋದು ಗಂಡನ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಆಗಾಗ ಇಬ್ಬರ ನಡುವೆ ಜಗಳವಾಗ್ತಿತ್ತು. ಕುಟುಂಬದ ಹಿರಿಯರು ಹಲವು ಬಾರಿ ಮಧ್ಯಪ್ರದವೇಶಿಸಿ ಸಮಾಧಾನಪಡಿಸಿದ್ದರು. ಆದ್ರೆ ಪತಿಯ ಸಂಪ್ರದಾಯ ಪಾಲನೆ ಕಿರಿಕ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಪತಿಗೆ ನೋಟಿಸ್ ನೀಡಿದೆ.