ನವದೆಹಲಿ: ಲೆಬನಾನ್‌ನಲ್ಲಿ (Lebanon) ಇತ್ತೀಚಿಗೆ ಪೇಜರ್ ಸ್ಫೋಟಗೊಂಡ (Pager Blast) ಬೆನ್ನಲ್ಲೇ ಭಾರತ (India) ಮಾರುಕಟ್ಟೆಯಲ್ಲಿ ಚೀನಿ ಕಣ್ಗಾವಲು ಉಪಕರಣಗಳ ಬಳಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ವರದಿಯಾಗಿದೆ.
ಸರ್ಕಾರ ಕಣ್ಗಾವಲು ಕ್ಯಾಮೆರಾಗಳ ನೀತಿಯು ಅಕ್ಟೋಬರ್ 8 ರಂದು ಜಾರಿಗೆ ಬರುವ ಸಾಧ್ಯತೆಯಿದೆ. ಈ ನೀತಿ ಪ್ರಕಟವಾದ ನಂತರ ದೇಶಿಯ ಕಂಪನಿಗಳಿಗೆ ಲಾಭವಾಗಲಿದೆ.
Advertisement
ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಗೆಜೆಟ್ ಅಧಿಸೂಚನೆಗಳು ಹೊರಬಂದಿದ್ದರೂ ಲೆಬನಾನ್ ಸ್ಫೋಟಗಳ ನಂತರ ಜಾರಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:5ಜಿ ಯುಗದಲ್ಲೂ ಹಿಜ್ಬುಲ್ಲಾ ಉಗ್ರರು ಪೇಜರ್ ಬಳಸುತ್ತಿರುವುದು ಯಾಕೆ?
Advertisement
Advertisement
ಹೊಸ ನೀತಿ ಜಾರಿಯಾದರೆ ವಿಶ್ವಾಸಾರ್ಹ ಕಡೆಯಿಂದ ಉತ್ಪಾದನೆಯಾದ ಸಿಸಿಟಿವಿಗಳನ್ನು (CCTV) ಮಾತ್ರ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹೊರಬಂದ ಎರಡು ಪ್ರತ್ಯೇಕ ಗೆಜೆಟ್ ನೋಟಿಫಿಕೇಶನ್‌ಗಳಲ್ಲಿ ಒಂದು ಕಣ್ಗಾವಲು ಕ್ಯಾಮೆರಾಗಳಿಗಾಗಿ ‘ಮೇಕ್ ಇನ್ ಇಂಡಿಯಾ’ ಮಾರ್ಗಸೂಚಿ ಇದ್ದರೆ ಇನ್ನೊಂದು ಸಿಸಿಟಿವಿ ಪ್ರಮಾಣೀಕರಣ ಮಾನದಂಡದ ಬಗ್ಗೆ ವಿವರವಿದೆ.
Advertisement
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ CP Plus, Hikvision ಮತ್ತು Dahua ಕಂಪನಿಗಳು 60% ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. CP Plus ಭಾರತೀಯ ಕಂಪನಿಯಾಗಿದ್ದು, Hikvision ಮತ್ತು Dahua ಚೀನಿ ಕಂಪನಿಗಳಾಗಿವೆ. ಇದನ್ನೂ ಓದಿ: ರೈಲು ದುರಂತಕ್ಕೆ ಸಂಚು ಹೆಚ್ಚಾಗುತ್ತಿದ್ದಂತೆ 75 ಲಕ್ಷ AI ಕ್ಯಾಮೆರಾ ಖರೀದಿಗೆ ಮುಂದಾದ ಇಲಾಖೆ
ನವೆಂಬರ್ 2022 ರಲ್ಲಿ ಅಮೆರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC) ರಾಷ್ಟ್ರೀಯ ಭದ್ರತೆಗೆ ಅಪಾಯಗಳಿದೆ ಎಂಬ ಕಾರಣ ನೀಡಿ Hikvision ಮತ್ತು Dahua ಉಪಕರಣಗಳ ಮಾರಾಟವನ್ನು ನಿಷೇಧಿಸಿದೆ. ದೇಶದ ಮೇಲೆ ಕಣ್ಣಿಡಲು ತಮ್ಮ ಉಪಕರಣಗಳನ್ನು ಚೀನಾ ಬಳಸಬಹುದೆಂಬ ಕಳವಳದ ನಂತರ FCC ನಿಷೇಧಿಸಿತ್ತು.
ಇತ್ತೀಚೆಗೆ ಭಾರತ ಸರ್ಕಾರವು ಚೀನಾದ ಸಿಸಿಟಿವಿ ಉಪಕರಣಗಳ ಟೆಂಡರ್‌ಗಳನ್ನು ತಿರಸ್ಕರಿಸಿವೆ. ಈಗ ಬಾಷ್‌ನಂತಹ ಯುರೋಪಿಯನ್ ಕಂಪನಿಗಳಿಗೆ ಆದ್ಯತೆ ನೀಡುತ್ತಿದೆ. ಚೀನಿ ಕಂಪನಿಗಳಿಗೆ ಹೋಲಿಸಿದರೆ ಭಾಷ್ ಸಿಸಿ ಕ್ಯಾಮೆರಾಗಳ ಬೆಲೆ ಸುಮಾರು 7-10 ಪಟ್ಟು ದುಬಾರಿಯಾಗಿದೆ.