ವಾಷಿಂಗ್ಟನ್: ಅಮೆರಿಕಾದ ಮಹಿಳೆಯೊಬ್ಬಳು ಸಂಪೂರ್ಣ ನಗ್ನಳಾಗಿ ಮೈಮೇಲೆ ಬಾಡಿ ಪೇಂಟ್ ಹಚ್ಚಿ ಬಿಯರ್ ಸರ್ವ್ ಮಾಡಿ ಸುದ್ದಿಯಾಗಿದ್ದಾಳೆ.
ಶನೋನ್ ಎಂಬಾಕೆ ಸಂಪೂರ್ಣ ನಗ್ನಳಾಗಿ ಬಿಯರ್ ಸರ್ವ್ ಮಾಡಿದ್ದಾಳೆ. ಶನೋನ್ ಮೇರಿಲ್ಯಾಂಡ್ನ ಲೀಸ್ ಲ್ಯಾಂಡಿಂಗ್ ಡಾಕಿಂಗ್ ಬಾರ್ ನಲ್ಲಿ ವೇಟ್ರೆಸ್ ಆಗಿ ಕೆಲಸ ಮಾಡುತ್ತಿದ್ದು ಈಕೆಗೆ ಜೆನ್ ಸೈದೆಲ್ ಹಾಗೂ ಆಕೆ ಮಗಳು ಕೆನ್ನಿಡಿ ಬಾಡಿ ಪೇಂಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಕಳೆದ ಗುರುವಾರ ತನ್ನ ಮೈ ಮೇಲೆ ಬಾಡಿ ಪೇಂಟ್ ಮಾಡಿಸಿ ಬಾರಿನಲ್ಲಿ ಎಲ್ಲರಿಗೂ ಬಿಯರ್ ಸರ್ವ್ ಮಾಡಿದಾಗ ಗ್ರಾಹಕರಿಗೆ ಮೊದಲು ಆಕೆ ಬಟ್ಟೆ ಧರಿಸಲಿಲ್ಲ ಎಂಬುದು ಗಾಹಕರಿಗೆ ಗೊತ್ತಾಗಿರಲಿಲ್ಲ.
Advertisement
ಕೆಲವು ನಿಮಿಷಗಳ ನಂತರ ಬಾರಿನಲ್ಲಿ ಇದ್ದ ಎಲ್ಲರೂ ಶನೋನ್ನನ್ನು ನೋಡಲು ಶುರು ಮಾಡಿದ್ದಾರೆ. ಕೆಲವು ಮಂದಿ ಶನೋನ್ನನ್ನು ನೋಡಿ ಗುಸುಗುಸು ಮಾತನಾಡಲು ಶುರು ಮಾಡಿದ್ದರು. ಇನ್ನೂ ಕೆಲವು ಮಂದಿ ನೇರವಾಗಿ ಆಕೆಯ ಜೊತೆ ಮಾತನಾಡಿದ್ದರು. ಕೆಲವರು ಆಕೆಯಿಂದ ಸರ್ವ್ ಮಾಡಿಸಿಕೊಳ್ಳುವುದರ ಬದಲು ಆಕೆ ಜೊತೆ ಸೆಲ್ಫೀ ಹಾಗೂ ಫೋಟೋ ತೆಗೆಸಿಕೊಂಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv