ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿ ಎರಡು ವಾರ ಕಳೆದಿದೆ. ಆದ್ರೆ ಸಂಪುಟ ರಚನೆಯ ಬಿಕ್ಕಟ್ಟು ಮಾತ್ರ ಕಗ್ಗಂಟಾಗಿದೆ. ಇಂದು ಮಧ್ಯಾಹ್ನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮಂಗಳವಾರ ರಾತ್ರಿ ಸುಮಾರು 2 ಗಂಟೆಗಳ ಕಾಲ ದೇವೇಗೌಡರು ಪುತ್ರ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದಾರೆ.
ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಿಎಂ, ಇನ್ನು ಸ್ವಲ್ಪ ಹೊತ್ತು ಕಾಯಿರಿ, ಎಲ್ಲವೂ ಗೊತ್ತಾಗುತ್ತೆ, ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ಪಟ್ಟಿ ಇನ್ನು ದೆಹಲಿಯಿಂದ ಬರಬೇಕಿದೆ. ಬಂದ ತಕ್ಷಣ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸುತ್ತೇವೆ ಅಂದ್ರು.
Advertisement
Advertisement
ಜೆಡಿಎಸ್ ಪಟ್ಟಿ ಕೂಡ ಬಹುತೇಕ ಅಂತಿಮವಾಗಿದೆ. ಇಂದು ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬುದರ ಸಂಭಾವ್ಯ ಪಟ್ಟಿ ಹೀಗಿದೆ.
ಒಕ್ಕಲಿಗ ಕೋಟಾ – 4 ಸಚಿವ ಸ್ಥಾನ
* ಎಚ್.ಡಿ. ರೇವಣ್ಣ, ಹೊಳೆನರಸೀಪುರ
* ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ
* ಸಿ.ಎಸ್. ಪುಟ್ಟರಾಜು, ಮೇಲುಕೋಟೆ
* ಸತ್ಯನಾರಾಯಣ, ಶಿರಾ
Advertisement
ಕುರುಬ ಕೋಟಾ – 1 ಸ್ಥಾನ
ಬಂಡೆಪ್ಪ ಕಾಶೆಂಪುರ್, ಬೀದರ್ ದಕ್ಷಿಣ
Advertisement
ಲಿಂಗಾಯತರ ಕೋಟಾ – 1 ಸ್ಥಾನ
* ವೆಂಕಟರಾವ್ ನಾಡಗೌಡ- ಸಿಂಧನೂರು
ಎಸ್‍ಸಿ ಕೋಟಾ – 1 ಸ್ಥಾನ
ಎನ್. ಮಹೇಶ್- ಕೊಳ್ಳೇಗಾಲ
ಇಂದು ಮಧ್ಯಾಹ್ನ 02-12ಕ್ಕೆ ರಾಜಭವನದ ಗ್ಲಾಸ್‍ಹೌಸ್‍ನಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಬಾಯ್ ವಾಲಾ ಪ್ರಮಾಣವಚನ ಬೋದಿಸಲಿದ್ದಾರೆ. ಜೆಡಿಎಸ್‍ನಿಂದ 8 ಜನ, ಕಾಂಗ್ರೆಸ್‍ನಿಂದ 14-17 ಜನ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.