ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನ (Bengaluru) ಬೆಚ್ಚಿಬೀಳಿಸಿದ್ದ ಮಹಾಲಕ್ಷ್ಮಿಯ ಮರ್ಡರ್ ಕೇಸ್‌ನಲ್ಲಿ (Mahalakshmi Murder Case) ಹಂತಕ ಜೀವಂತ ಸಿಗದಿದ್ದರೂ ಒಂದೊಂದೇ ಮಾಹಿತಿಗಳು ಹೊರಬರುತ್ತಿವೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತನಗಾದ ನೋವನ್ನು, ಮಹಾಲಕ್ಷ್ಮಿಯೊಟ್ಟಿಗೆ ನಡೆದ ಘಟನೆಗಳನ್ನು ಆತನ ಸಹೋದರ ಹಾಗೂ ತಾಯಿ ಬಳಿ ಹೇಳಿದ್ದನಂತೆ. ಸಹೋದರನ ವಿಚಾರಣೆಯಲ್ಲಿ ಹಂತಕ ಹೇಳಿದ್ದ ಪಶ್ಚಾತ್ತಾಪದ ಸಿಕ್ರೆಟ್ ಬಯಲಾಗಿದೆ.
ಮಹಾಲಕ್ಷ್ಮಿ ಜೊತೆಗೆ ಅನ್ಯೋನ್ಯತೆಯಿಂದ ಇದ್ದ ಮುಕ್ತಿರಂಜನ್ ಈ ಹಿಂದೆ ಅವಳ ಜೊತೆ ದೆಹಲಿಗೆ ನಾಲ್ಕು ದಿನಗಳ ಟ್ರಿಪ್ ಹೋಗಿದ್ದ. ಕೊಲೆ ಮಾಡಿದ ನಂತರ ಮತ್ತೆ ದೆಹಲಿಗೆ ಹೋದ ಮುಕ್ತಿ ಅಲ್ಲಿ ಅವಳೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕುಹಾಕಿ ಪಶ್ಚಾತ್ತಾಪಪಟ್ಟಿದ್ದನಂತೆ. ಈ ಬಗ್ಗೆ ದೆಹಲಿಯಿಂದ ಸಹೋದರ ಹಾಗೂ ತಾಯಿಗೆ ಕರೆ ಮಾಡಿ ತಿಳಿಸಿದ್ದು, ಸೆಪ್ಟೆಂಬರ್ 22 ರಂದು ಮುಕ್ತಿರಂಜನ್ ಸಹೋದರನ ವಿಚಾರಣೆಯಲ್ಲಿ ಈ ಸ್ಟೋರಿ ಬಯಲಾಗಿದೆ. ಕೋಪದಲ್ಲಿ ಆಕೆಯನ್ನು ನಾನು ಕೊಲೆ ಮಾಡಿದೆ. ಆದರೆ ಈಗ ಆಕೆಯ ನೆನಪು ನನ್ನನ್ನು ಕಾಡುತ್ತಿದೆ ಎಂದು ಮುಕ್ತಿರಂಜನ್ ತನ್ನ ತಾಯಿಯ ಬಳಿ ಅಳಲು ತೋಡಿಕೊಂಡಿದ್ದ. ಇದನ್ನೂ ಓದಿ: Kolara | ತಾಂತ್ರಿಕ ದೋಷ – ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ತಪ್ಪಿದ ದುರಂತ
Advertisement
Advertisement
ಕೊಲೆಯ ನಂತರ ಪಶ್ಚಿಮ ಬಂಗಾಳ ಮಾತ್ರವಲ್ಲದೇ ದೆಹಲಿಯಲ್ಲೂ ವಾಸ್ತವ್ಯ ಹೂಡಿದ್ದ ಮುಕ್ತಿ ಅವಳ ನೆನಪುಗಳನ್ನು ಅಲ್ಲಿ ಕಂಡಿದ್ದ. ಕೊನೆಗೆ ಪಶ್ಚಿಮ ಬಂಗಾಳಕ್ಕೆ ಹೋದ ನಂತರ ಸಹೋದರನ ಐಡಿ ಪ್ರೂಫ್ ಕೊಟ್ಟು ಹೊಸ ಸಿಮ್ ಖರೀದಿಸಿದ್ದ. ಹಳೆ ಸಿಮ್ ಅನ್ನು ಪಶ್ಚಿಮ ಬಂಗಾಳಕ್ಕೆ (West Bengal) ತೆರಳುತ್ತಿದ್ದಂತೆ ಸ್ವಿಚ್‌ಆಫ್ ಮಾಡಿದ್ದ. ಸಹೋದರನ ಹೆಸರಿನ ಪ್ರೂಫ್ ಸಲ್ಲಿಸಿ ಹೊಸ ಸಿಮ್ ಪಡೆದಿದ್ದ. ಒಡಿಶಾ ಫಂಡಿ ಗ್ರಾಮದಲ್ಲೇ ಇದ್ದರೆ ಪೊಲೀಸರು ಬರುತ್ತಾರೆ ಎಂದು ಊರುಬಿಟ್ಟಿದ್ದ ಈತ ತಾನು ಹತ್ಯೆ ಮಾಡಿದ ವಿಚಾರ ಹೊರಬರುವವರೆಗೂ ಒದ್ದಾಡಿದ್ದ. ಹೊಸ ಸಿಮ್‌ನ ಮಾಹಿತಿ ಪೋಲಿಸರಿಗೆ ಸಿಕ್ಕಿದರೂ ನಿಖರವಾದ ಲೊಕೇಷನ್ ಸಿಕ್ಕಿರಲಿಲ್ಲ. ಇದನ್ನೂ ಓದಿ: Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್
Advertisement
Advertisement
ಕೊಲೆ ಮಾಡಿದ ನಂತರ ಈತನ ಪತ್ತೆಗೆ ಸಿಕ್ಕ ಮುಖ್ಯ ಸುಳಿವೇ ಈತನ ಸಹೋದರ ಶಕ್ತಿ ರಂಜನ್. ಈತನನ್ನು ವಿಚಾರಣೆ ಮಾಡಿದಾಗ ಮುಕ್ತಿರಂಜನ್ ಸುಳಿವು ಸಿಕ್ಕಿತ್ತು. ಬೆಂಗಳೂರಿನಿಂದ ಪೊಲೀಸರು ಆತನನ್ನು ಹುಡುಕಿಕೊಂಡು ಬಂದಿರುವ ವಿಚಾರ ತಾಯಿಯಿಂದ ತಿಳಿದಿದ್ದ ಮುಕ್ತಿ ಪೊಲೀಸರು ತನ್ನ ಬಳಿ ಬರುವ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ಆತನ ಬಗೆಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆತನಿಗೆ ಯಾರಾದರೂ ಸಹಾಯ ಮಾಡಿದ್ದರಾ ಎಂಬ ಬಗೆಗೆ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಸಂಪುಟ ಪುನರ್‌ರಚನೆ – ಮತ್ತೆ ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಪ್ರಮಾಣವಚನ ಸ್ವೀಕಾರ