ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಪಡೆದಿರುವ ಭಾರತ, ಮುಂಬರುವ ಏಕದಿನ ಸರಣಿಯಲ್ಲಿ ವೈಟ್‍ವಾಶ್ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದ ಶ್ರೀಲಂಕಾ ಮಾಜಿ ಆಟಗಾರ ರಸೆಲ್ ಅರ್ನಾಲ್ಡ್ ಅವರಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮರುಟ್ವೀಟ್ ಮಾಡಿ ಕಾಲೆಳೆದಿದ್ದಾರೆ.
ಭಾರತ- ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ 1-0 ಮುಕ್ತಾಯವಾಗಿದೆ. ಆದರೆ ಕಳೆದ ಬಾರಿ ಹಾಗೇ ಮುಂಬರುವ ಏಕದಿನ ಸರಣಿ 5-0 ಯೊಂದಿಗೆ ಮುಕ್ತಾಯವಾಗುವುದಿಲ್ಲ ಎಂದು ಆಶ್ವಾಸನೆ ನೀಡುವುದಾಗಿ ರೆಸೆಲ್ ಅರ್ನಾಲ್ಡ್ ಟ್ವೀಟ್ ಮಾಡಿದ್ದರು.
Advertisement
So Test series ends 1-0 and I can promise you the ODI's wont end 5-0 like it did a few months ago !!!
— Russel Arnold (@RusselArnold69) December 7, 2017
Advertisement
ಅರ್ನಾಲ್ಡ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ವಿವಿಎಸ್ ಲಕ್ಷ್ಮಣ್ ಭಾರತ ಮತ್ತು ಲಂಕಾ ನಡುವಿನ ಏಕದಿನ ಸರಣಿ 3 ಪಂದ್ಯಗಳಿಂದ ಕೂಡಿದ್ದು ನಿಮ್ಮ ಭವಿಷ್ಯ ಸುಳ್ಳಾಗಲಿದೆ ಎಂದು ಮರು ಟ್ವೀಟ್ ಮಾಡಿದ್ದಾರೆ. ಲಕ್ಷ್ಮಣ್ ಅವರ ಟ್ವೀಟ್ ಗೆ ಹಲವು ಟೀಂ ಇಂಡಿಯಾ ಅಭಿಮಾನಿಗಳು ಮರು ಟ್ವೀಟ್ ಮಾಡಿ, ಅರ್ನಾಲ್ಡ್ ಅವರ ಕಾಲೆಳೆದಿದ್ದಾರೆ.
Advertisement
ವರ್ಷದ ಆರಂಭದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಲಂಕಾ ವಿರುದ್ಧದ ಮೂರು ಮಾದರಿಯ ಕ್ರಿಕೆಟ್ (ಟೆಸ್ಟ್-3, ಏಕದಿನ-3, ಟಿ20-3) ಸರಣಿಯಲ್ಲಿ ಗೆಲವು ಪಡೆದು ವೈಟ್‍ವಾಶ್ ಮಾಡಿತ್ತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಡೆದ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಗೆಲುವು ಪಡೆದಿರುವ ದಾಖಲೆ ನಿರ್ಮಿಸಿದೆ.
Advertisement
ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದಲ್ಲಿ ಸೋಲು ಪಡೆದಿದೆ. ಡಿಸೆಂಬರ್ 10 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಇದೇ ವಿಚಾರವಾಗಿ ಅರ್ನಾಲ್ಡ್ ಟ್ವೀಟ್ ಮಾಡಿದ್ದರು. ಏಕದಿನ ಸರಣಿಯ ನಂತರ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
Sure Russel , it won’t in a 3 match series. This prediction won’t fail. https://t.co/zhJTlwUV92
— VVS Laxman (@VVSLaxman281) December 8, 2017
yeah bcoz only 3 odi matches only
— gopalakrishnan (@im_Gopal94) December 7, 2017
https://twitter.com/sgntweets/status/938719961887002624
— ً (@TheRobustRascal) December 8, 2017
— dimaagkoshot (@dimaagkoshot) December 8, 2017
— sai (@fe4e9bd80d4240c) December 8, 2017
???? Russel Arnold is the king of being trolled ! ????????
— Harnam Kaur ???? (@ThatCricGirl) December 8, 2017