ಬೆಂಗಳೂರು: ಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೂತನ ಮುಖ್ಯಸ್ಥರಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಲಕ್ಷ್ಮಣ್ ಅವರು ತಮ್ಮ ಕಚೇರಿಯಲ್ಲಿ ಮೊದಲ ದಿನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾದ ಮುಖ್ಯ ತರಬೇತುದಾರರಾಗಿ ನೇಮಕವಾದ ನಂತರ ಎನ್‌ಸಿಎಯಲ್ಲಿ ಉನ್ನತ ಹುದ್ದೆಯನ್ನು ವಿವಿಎಸ್ ಲಕ್ಷ್ಮಣ್ ಅಲಂಕರಿಸಿದ್ದರು.
Advertisement
Advertisement
ಲಕ್ಷ್ಮಣ್ ಅವರು ಈ ಫೋಟೋವನ್ನು ಶೇರ್ ಮಾಡಿಕೊಂಡು ಎನ್‌ಸಿಎ ಕಚೇರಿಯಲ್ಲಿ ಮೊದಲ ದಿನ. ಬೇರೆ ಬೇರೆ ಸವಾಲಿಗೆ ನಾನು ಹೆಚ್ಚು ಉತ್ಸುಕನಾಗಿದ್ದೇನೆ. ಭಾರತೀಯ ಕ್ರಿಕೆಟ್‌ನ ಭವಿಷ್ಯದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
Advertisement
First day in office at the NCA! An exciting new challenge in store, look forward to the future and to working with the future of Indian cricket. pic.twitter.com/gPe7nTyGN0
— VVS Laxman (@VVSLaxman281) December 13, 2021
Advertisement
ಇದೇ ವೇಳೆ ಮಾಜಿ ಆಟಗಾರ ಇರ್ಫಾನ್ ಪಠಾಣ್ ಲಕ್ಷ್ಮಣ್ ಅವರಿಗೆ ಶುಭ ಹಾರೈಸಿದರು. ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಎನ್‌ಸಿಎ ಇನ್ನೂ ಉತ್ತುಂಗದ ಸ್ಥಾನಕ್ಕೆರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು
ಎನ್‌ಸಿಎಯಲ್ಲಿ ಭಾರತೀಯ ಕ್ರಿಕೆಟ್‌ನ ಉನ್ನತಿಗಾಗಿ ಲಕ್ಷ್ಮಣ್ ಅವರು ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದರು.