– ಕ್ಯಾಲೋರಿ ಲೆಕ್ಕದಲ್ಲಿ ಊಟ
– ಟಿವಿ, ಲೈಬ್ರರಿ ಬಳಸಲು ಅನುಮತಿ
ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಪಿ.ಚಿದಂಬರಂ ಪಕ್ಕದ ಸೆಲ್‍ನಲ್ಲೇ ಕನಕಪುರದ ಬಂಡೆ ದಿನ ಕಳೆಯುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದು ವಿಚಾರಣಾಧೀನ ಖೈದಿಯಾಗಿದ್ದರಿಂದ ತಿಹಾರ್ ಜೈಲಿನಲ್ಲಿ ವಿವಿಐಪಿ ರೀತಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ. ಜೈಲಿನ ನಿಯಮಾವಳಿಯಂತೆ ಡಿಕೆಶಿ ಇಡೀ ರಾತ್ರಿ ತಿಹಾರ್ ಬ್ಯಾರಕ್ 7ರಲ್ಲಿ ಕಾಲ ಕಳೆದಿದ್ದಾರೆ. ನಿಯಮದ ಪ್ರಕಾರ ತಿಹಾರ್ ಜೈಲಿನಲ್ಲಿ ಒಂದು ಸುತ್ತು ಮೆಡಿಕಲ್ ಟೆಸ್ಟ್‍ಗೆ ಒಳಪಡಿಸಲಾಗುತ್ತದೆ. ಕೋರ್ಟ್ ಅನುಮತಿ ನೀಡದ ಹೊರತು ಯಾವುದೇ ವಿಶೇಷ ಸೌಲಭ್ಯವನ್ನು ಜೈಲಿನಲ್ಲಿ ನೀಡುವುದಿಲ್ಲ.
Advertisement
Advertisement
ಕೋಟ್ಯಧಿಪತಿ ಡಿ.ಕೆ.ಶಿವಕುಮಾರ್, ಬೆಳಗ್ಗೆ 6ರಿಂದ 7ರ ಒಳಗೆ ಎದ್ದು ನಿತ್ಯಕರ್ಮ ಮುಗಿಸಿಕೊಂಡು ಫ್ರೆಶ್ ಅಪ್ ಆಗಬೇಕು. ಬೆಳಗ್ಗೆ ಏಳು ಗಂಟೆಗೆ ತಿಂಡಿ ನೀಡಲಾಗುತ್ತದೆ. ತಿಂಡಿ ಮೆನು ದಾಲಿಯಾ, ಬ್ರೆಡ್, ಟೀ, ಕಾಫಿಯನ್ನು ಜೈಲು ಸಿಬ್ಬಂದಿ ನೀಡುತ್ತಾರೆ. ಡಿಕೆಶಿ ವಿಚಾರಣಾಧೀನ ಖೈದಿಯಾಗಿದ್ದರಿಂದ ತನ್ನ ರೂಮ್‍ನಿಂದ ಹೊರಗೆ ಬರಬಹುದು. ವಾಕಿಂಗ್, ವ್ಯಾಯಾಮ, ಲೈಬ್ರರಿ ಹಾಗೂ ಟಿವಿ ಬಳಸಬಹುದಾಗಿದೆ.
Advertisement
ಮಧ್ಯಾಹ್ನ 1 ಗಂಟೆಗೆ ಊಟ ನೀಡಲಾಗುತ್ತದೆ. ಊಟದ ಮೆನು ಪ್ರಕಾರ ರೋಟಿ, ದಾಲ್, ಸಬ್ಜಿ, ಅನ್ನ ಸಾಂಬಾರ್ ನೀಡಲಾಗುತ್ತದೆ. ಅಲ್ಲದೆ ಜೈಲಿನಲ್ಲಿರುವ ಟಿವಿಯನ್ನು ಸಹ ನೋಡಲು ಅವಕಾಶವಿರುತ್ತದೆ. ಕೋರ್ಟ್ ಅನುಮತಿ ನೀಡಿದರೆ ಕುಟುಂಬದವರು ಹಾಗೂ ವಕೀಲರನ್ನು ಸಹ ಜೈಲಿನಲ್ಲಿ ಭೇಟಿ ಮಾಡಬಹುದು. ಮನೆ ಊಟ ಬೇಕು ಎಂದಾದಲ್ಲಿ ಕೋರ್ಟ್ ನಿಂದ ಅನುಮತಿ ಪಡೆಯಬೇಕಾಗಿರುತ್ತದೆ.
Advertisement
ರಾತ್ರಿ 7 ರಿಂದ 8 ಗಂಟೆಯೊಳಗೆ ರಾತ್ರಿಯ ಊಟ ಕೊಡಲಾಗುತ್ತದೆ. ರಾತ್ರಿ ಊಟದ ಮೆನುನಲ್ಲಿ ರೋಟಿ ಸಬ್ಜಿ, ದಾಲ್, ರಾಜ್ಮಾ ನೀಡಲಾಗುತ್ತದೆ. ಇನ್ನು ತಿಹಾರ್ ಜೈಲಿನಲ್ಲಿ ಪ್ರತಿ ಸಲ ಕೊಡುವ ತಿಂಡಿ ಮತ್ತು ಊಟವನ್ನು ಕ್ಯಾಲೊರಿ ಲೆಕ್ಕದಲ್ಲಿ ಕೊಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಕೋರ್ಟಿ ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಒಂದು ವೇಳೆ ಜಾಮೀನು ಅರ್ಜಿ ತಿರಸ್ಕøತವಾದರೆ ಡಿಕೆಶಿಗೆ ಜೈಲಿನಲ್ಲೇ ಅ.1ರವರೆಗೆ ದಿನ ಕಳೆಯಬೇಕಾಗುತ್ತದೆ. ಜೈಲಿನಲ್ಲಿ ಉಳಿಯಬೇಕಾದಲ್ಲಿ ಆಗ ಕೋರ್ಟ್ ವಿಶೇಷ ಸೌಲಭ್ಯ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಿದೆ. ಒಂದು ವೇಳೆ ವಿಶೇಷ ಸೌಲಭ್ಯ ನೀಡಲು ಕೋರ್ಟ್ ಅನುಮತಿ ಸೂಚಿಸಿದರೆ, ಮನೆಯ ಊಟ, ವಾಕಿಂಗ್, ವಕೀಲರ ಭೇಟಿಗೆ ಅವಕಾಶ ನೀಡಲಾಗುತ್ತದೆ. ಕೋರ್ಟ್ ಅನುಮತಿ ನೀಡದಿದ್ದಲ್ಲಿ, ಸಾಮಾನ್ಯ ಖೈದಿಯಂತೆ ಡಿಕೆಶಿ ಸಹ ಜೈಲಿನಲ್ಲಿ ಕಾಲ ಕಳೆಯಬೇಕಾಗುತ್ತದೆ.