ಮಹಿಳಾ ದಿನಾಚರಣೆ ದಿನ ಜೆಡಿಎಸ್, ಕಾಂಗ್ರೆಸ್ ಬೆಂಬಲಿಗರಿಂದ ಪ್ರತ್ಯೇಕ ಅಶ್ಲೀಲ ನೃತ್ಯ

Public TV
1 Min Read
vlcsnap 2022 03 09 13h33m05s728 1

ಮಂಡ್ಯ: ವಿಶ್ವ ಮಹಿಳೆಯರ ದಿನದಂದೇ ಮಧ್ಯರಾತ್ರಿವರೆಗೆ ತುಂಡು ಬಟ್ಟೆ ಧರಿಸಿರುವ ಹುಡುಗಿಯರನ್ನು ಕರೆತಂದು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಬೆಂಬಲಿಗರು ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಅಶ್ಲೀಲ ನೃತ್ಯ ಮಾಡಿಸಿದ್ದಾರೆ.

ನಾಗಮಂಗಲ ತಾಲೂಕಿನ ತೊಳಸಿ ಕೊಂಬರಿ ಗೇಟ್ ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಜೆಡಿಎಸ್ ಶಾಸಕ ಸುರೇಶ್‍ಗೌಡ ಹಾಗೂ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಬೆಂಬಲಿಗರು ಪ್ರತ್ಯೇಕವಾಗಿ ಆರ್ಕೇಸ್ಟ್ರಾ ಆಯೋಜನೆ ಮಾಡಿದ್ದರು. ಈ ವೇಳೆ ಎರಡು ಪಕ್ಷದ ಬೆಂಬಲಿಗರು ತುಂಡು ಬಟ್ಟೆ ಧರಿಸಿರುವ ಹುಡುಗಿಯರನ್ನು ಕರೆಸಿ ಹಸಿ-ಬಿಸಿಯಾಗಿ ನೃತ್ಯ ಮಾಡಿಸಿದ್ದಾರೆ. ಇದನ್ನೂ ಓದಿ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

mandya rasamanjri 1 1

ಕಾಂಗ್ರೆಸ್ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯ ಬೆಳಗ್ಗೆ ವೈರಲ್ ಆಗಿತ್ತು. ಇದೀಗ ಜೆಡಿಎಸ್ ಬೆಂಬಲಿಗರು ಆಯೋಜಿಸಿದ್ದ ಅಶ್ಲೀಲ ಮಾದರಿ ನೃತ್ಯ ಬಿಡುಗಡೆಯಾಗಿದೆ. ರಾಜಕೀಯ ಲಾಭಕ್ಕಾಗಿ ಎಲ್ಲದಕ್ಕೂ ಜೈ ಅನ್ನುವ ಈ ರಾಜಕೀಯ ಪಕ್ಷಗಳು, ವಿಶ್ವ ಮಹಿಳಾ ದಿನದಂದೇ ಅಶ್ಲೀಲ ಮಾದರಿ ಡ್ಯಾನ್ಸ್ ಮಾಡಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುವಕರ ಓಲೈಕೆಗೆ ಹೀಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿಗರು ಮಾಡುತ್ತಿದ್ದಾರೆ. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

ಗ್ರಾಮ ದೇವತೆ ಹಬ್ಬಕ್ಕೆ ಬೇರೆಡೆಯಿಂದ ಹುಡುಗಿಯರನ್ನ ಕರೆಸಿ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು. ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಗ್ರಾಮದಲ್ಲಿಯೇ ಆಯೋಜನೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯರಾತ್ರಿ ಅರೆಬರೆ ಬಟ್ಟೆ ತೊಟ್ಟು ಮಾದಕ ನೃತ್ಯ ಮಾಡಿ ಗ್ರಾಮದ ಯುವಕರನ್ನು ಹುಡುಗಿಯರು ಹುಚ್ಚೆಬ್ಬಿಸಿದ್ದು, ಹಾಲಿ-ಮಾಜಿ ಶಾಸಕರ ಬೆಂಬಲಿಗರಿಂದ ಪ್ರತ್ಯೇಕ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದಾರೆ.

vlcsnap 2022 03 09 13h32m56s983

ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಜೆಡಿಎಸ್ ಪಕ್ಷದ ಶಾಸಕ ಸುರೇಶ್ ಗೌಡ ಬೆಂಬಲಿಗರು ಪ್ರತ್ಯೇಕವಾಗಿ ಪ್ರತ್ಯೇಕ ವೇದಿಕೆಯಲ್ಲಿ ಸನ್ಮಾನ ಮಾಡಿ ನಂತರ ಅವರಿಬ್ಬರೂ ತೆರಳಿದ ನಂತರ ಈ ರೀತಿ ನೃತ್ಯ ನಡೆಸಲಾಗಿದೆ. ವಿಶ್ವ ಮಹಿಳಾ ದಿನಾಚರಣೆ ದಿನವೇ ಪಡ್ಡೆ ಹುಡುಗಿಯರನ್ನು ಕರೆಸಿ ಮಧ್ಯರಾತ್ರಿವರೆಗೂ ಕುಣಿಸಿದ್ದಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ.

Share This Article