ಬೆಂಗಳೂರು: ರಾಜಕೀಯ ಉದ್ದೇಶಕ್ಕಾಗಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಒಡೆಯಲು ಮುಂದಾಗಿದೆ ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ಯ @hd_kumaraswamy
VTU ಗೆ ಸುಮಾರು 2 ದಶಕದ ಇತಿಹಾಸವಿದೆ, ಕೇವಲ ನಿಮ್ಮ ರಾಜಕೀಯ ದುರುದ್ದೇಶಕ್ಕಾಗಿ ಇಬ್ಭಾಗ ಮಾಡುತ್ತಿರುವುದು ಎಷ್ಟು ಸಮಂಜಸ?
ಇದು ಬೆಳಗಾವಿ ಜನತೆಗೆ ಮೈತ್ರಿ ಸರಕಾರ ಮಾಡುತ್ತಿರುವ ದ್ರೋಹ. ಕಾಂಗ್ರೆಸ್ ಪಕ್ಷದ ಮುಖಂಡರು ಇದರ ನೇರ ಹೊಣೆಗಾರರಾಗುತ್ತಾರೆ
ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು#SaveVTU #BudgetMosa pic.twitter.com/1fP3DNrKhl
— Mangal Suresh Angadi (@MangalSAngadi) February 9, 2019
Advertisement
ಟ್ವೀಟ್ ನಲ್ಲಿ ಏನಿದೆ?
ವಿಟಿಯುಗೆ ಸುಮಾರು 2 ದಶಕದ ಇತಿಹಾಸವಿದೆ, ಕೇವಲ ನಿಮ್ಮ ರಾಜಕೀಯ ದುರುದ್ದೇಶಕ್ಕಾಗಿ ಇಬ್ಭಾಗ ಮಾಡುತ್ತಿರುವುದು ಎಷ್ಟು ಸಮಂಜಸ? ಇದು ಬೆಳಗಾವಿ ಜನತೆಗೆ ಮೈತ್ರಿ ಸರಕಾರ ಮಾಡುತ್ತಿರುವ ದ್ರೋಹ. ಕಾಂಗ್ರೆಸ್ ಪಕ್ಷದ ಮುಖಂಡರು ಇದರ ನೇರ ಹೊಣೆಗಾರರಾಗುತ್ತಾರೆ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಸುರೇಶ್ ಅಂಗಡಿ ಆಗ್ರಹಿಸಿದ್ದಾರೆ.
Advertisement
ಹಾಸನ ಸೇರಿದಂತೆ ರಾಜ್ಯದ ಯಾವುದೇ ಭಾಗವನ್ನು ಅಭಿವೃದ್ಧಿ ಮಾಡುವ ವಿಚಾರದಲ್ಲಿ ನಮ್ಮ ವಿರೋಧ ಇಲ್ಲ. ಆದರೆ ಉತ್ತರ ಕರ್ನಾಟಕ ಮತ್ತು ಬೆಳಗಾವಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ? ಈ ಮೂಲಕ ಉತ್ತರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ. ವಿಟಿಯು ಒಡೆಯುವ ನಿರ್ಧಾರವನ್ನು ನಾನು ವಿರೋಧಿಸುತ್ತೇನೆ ಎಂದು ಅಂಗಡಿ ಹೇಳಿದ್ದಾರೆ.
Advertisement
Shri @hd_kumaraswamy we do not have any problem in developing Hassan or other places of the state But why do injustice to Belagavi & North Karnataka. I criticize & protest your decision of bifurcating VTU and showing step motherly treatment to NK. #SaveVTU #savebgm #SaveBelagavi pic.twitter.com/lKfRGRh5rh
— Mangal Suresh Angadi (@MangalSAngadi) February 9, 2019
Advertisement
ಸಿಎಂ ಹೇಳಿದ್ದು ಏನು?
ನಮ್ಮ ಸರ್ಕಾರವು ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಉದ್ದೇಶಿಸಿದೆ. ಈಗ ಕರ್ನಾಟಕದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಸಂಬಂಧಿತ ವಿಷಯಗಳು ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೇಂದ್ರೀಕೃತವಾಗಿವೆ. ಆದ್ದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೌಗೋಳಿಕ ಆಧಾರದ ಮೇಲೆ ಎಂಜಿನಿಯರಿಂಗ್ ಕಾಲೇಜುಗಳನ್ನು ಮರುವಿಂಗಡಣೆ ಮಾಡಿ ಹಾಸನದಲ್ಲಿ ಒಂದು ಹೊಸ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬಜೆಟ್‍ನಲ್ಲಿ ಪ್ರಕಟಿಸಿದ್ದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಇಬ್ಭಾಗ ಮಾಡುವ ಪ್ರಸ್ತಾಪಕ್ಕೆ ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ ತಿಳಿಸಿ
ಮಾನ್ಯ @hd_kumaraswamy
ನಿಮ್ಮ ಹಾಗು ಕಾಂಗ್ರೆಸ್ ನವರ ಒಡೆದಾಳುವ ತಂತ್ರವನ್ನು ಸ್ಥಾಪಿತ ವಿಶ್ವವಿದ್ಯಲಯವನ್ನು ಇಬ್ಭಾಗ ಮಾಡಿ ವಿದ್ಯಾರ್ಥಿಗಳ ಜೀವನದ ಜೊತೆಗೆ ಆಟವಾಡಬೇಡಿ
ಎಡಿಟಿಂಗ್ ಹಾಗು ಚಿತ್ರೀಕರಣದಲ್ಲಿ ಪರಿಣಿತರಾದ ನೀವು ಹೊಸದೊಂದು ಎಡಿಟಿಂಗ್ ವಿಶ್ವವಿದ್ಯಾಲಯವನ್ನು ತವರು ಜಿಲ್ಲೆಯಲ್ಲಿಸ್ಥಾಪನೆ ಮಾಡಿ #HassanCM
@BJP4Karnataka
— Jagadish Shettar (@JagadishShettar) February 9, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv