ನವದೆಹಲಿ: ಕೇಂದ್ರ ಸರ್ಕಾರದ ಆದಾಯ ತೆರಿಗೆ ನೀತಿಯಿಂದ ವಿಶೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮುಚ್ಚುವ ಪರಿಸ್ಥಿತಿ ಗೆ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕಿಡಿ ಕಾರಿದ್ದಾರೆ.
ಆದಾಯ ತೆರಿಗೆ ವಿನಾಯತಿ ಪಡೆದಿಲ್ಲ ಎಂದು ವಿಟಿಯುನ 441 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡು, 123 ಕೋಟಿ ದಂಡವನ್ನು ವಿಧಿಸಿರುವ ಹಿನ್ನಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ರು.
Advertisement
ಮಾತುಕತೆ ವಿಫಲವಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಅವರು, ಸರ್ಕಾರದ ಶಿಕ್ಷಣ ಸಂಸ್ಥೆಗಳು ಆದಾಯ ತೆರಿಗೆ ಕಟ್ಟುವ ಪದ್ದತಿ ಇಲ್ಲ ಆದ್ರೆ, ಆದಾಯ ಇಲಾಖೆ ವಿಶ್ವವಿದ್ಯಾಲಯದ ಹಣವನ್ನು ಜಪ್ತಿ ಮಾಡಿದ್ದು ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗ್ತಿಲ್ಲ ಜೊತೆಗೆ ಪರೀಕ್ಷೆಗಳು ಹತ್ತಿರವಾಗುತ್ತಿದ್ದು ಪರೀಕ್ಷೆ ನಡೆಸಲು ವಿವಿ ಬಳಿ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವವಿದ್ಯಾಲಯ ಮುಚ್ಚಬೇಕಾದಿತು ಅಂತಾ ರಾಯರೆಡ್ಡಿ ಹೇಳಿದರು.
Advertisement
ಜಪ್ತಿ ಮಾಡಿಕೊಂಡಿದ್ದ ಹಣವನ್ನು ಮರಳಿನೀಡುವಂತೆ ಮನವಿ ಮಾಡಿದ್ರು ಅರುಣ್ ಜೇಟ್ಲಿ ಮನಸ್ಸು ಮಾಡುತ್ತಿಲ್ಲ. ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಮನವಿ ಮಾಡಿದ್ರು ಕ್ಯಾರೇ ಮಾಡ್ತಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು.
Advertisement
ಆದಾಯ ತೆರಿಗೆ ಇಲಾಖೆಯ ನಿಯಮಗಳ ಅನುಸಾರ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದ ರಾಯರೆಡ್ಡಿ ನಾಲ್ಕು ಲಕ್ಷ ವಿದ್ಯಾರ್ಥಿ ಗಳ ಭವಿಷ್ಯ ಡೋಲಾಯಮಾನವಾಗಿದೆ ಅಂತಾ ಆತಂಕ ವ್ಯಕ್ತಪಡಿಸಿದರು.