ದುಬೈ: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (Women’s Premier League) ಕರ್ನಾಟಕದ (Karnataka) ಯುವ ಆಟಗಾರ್ತಿ ವೃಂದಾ ದಿನೇಶ್ (Vrinda Dinesh) ಅವರು 1.3 ಕೋಟಿ ರೂ.ಗೆ ಯುಪಿ ವಾರಿಯರ್ಸ್ (UP Warriorz) ತಂಡಕ್ಕೆ ಸೋಲ್ಡ್ ಆಗಿದ್ದಾರೆ.
ದೇಶೀಯ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷ ವೃಂದಾ ಇನ್ನೂ ಟೀಂ ಇಂಡಿಯಾವನ್ನು (Team India) ಪ್ರತಿನಿಧಿಸಿಲ್ಲ. ಹೀಗಿದ್ದರೂ ದೇಶೀಯ ಪಂದ್ಯಗಳಲ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಗಮನಿಸಿ ಯುಪಿ ತಂಡ ವೃಂದಾ ಅವರನ್ನು ಖರೀದಿಸಿದೆ. ಈ ಮೂಲಕ ಟೀಂ ಇಂಡಿಯಾ ಪ್ರತಿನಿಧಿಸದೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಎರಡನೇ ಆಟಗಾರ್ತಿಯಾಗಿ ವೃಂದಾ ದಿನೇಶ್ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಗಂಭೀರ್ ವಿರುದ್ಧ ಆರೋಪ – ಶ್ರೀಶಾಂತ್‍ಗೆ ಲೀಗಲ್ ನೋಟಿಸ್ ಜಾರಿ
Advertisement
Advertisement
ಹರಾಜಿನಲ್ಲಿ ಇವರ ಮೂಲ ಬೆಲೆ 10 ಲಕ್ಷ ರೂ. ಇತ್ತು. ಆದರೆ ಘಟಾನುಘಟಿ ಆಟಗಾರರ್ತಿಯರನ್ನು ಹಿಂದಿಕ್ಕಿ ಭಾರೀ ಮೊತ್ತಕ್ಕೆ ವೃಂದಾ ಈಗ ಮಾರಾಟವಾಗಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಅವರು 2021ರಲ್ಲಿ ಬರೋಡಾ 83 ಎಸೆತಗಳಲ್ಲಿ 69 ರನ್ ಹೊಡೆದಿದ್ದರು. ಛತ್ತೀಸ್‌ಗಢದ ವಿರುದ್ಧ ಪಂದ್ಯದಲ್ಲಿ 67 ರನ್ ಹೊಡೆದಿದ್ದರು.
Advertisement
Vrindavan bhi yahin, Vrinda bhi yahin. ????#UPWarriorzUttarDega #CapriSports #TATAWPLAuction pic.twitter.com/0ERz6A30I1
— UP Warriorz (@UPWarriorz) December 9, 2023
Advertisement
ಮಹಿಳಾ ಹಿರಿಯರ ಏಕದಿನ ಸೀರಿಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅವರು 11 ಇನ್ನಿಂಗ್ಸ್‌ಗಳಿಂದ 477 ರನ್ ಹೊಡೆದಿದ್ದರು. ವೃಂದಾ ಎಸಿಸಿ ಎಮರ್ಜಿಂಗ್ ಟೀಂ ಕಪ್ ಜಯಿಸಿದ ಭಾರತ ಎ ತಂಡದ ಭಾಗವಾಗಿದ್ದರು.