ಯಾದಗಿರಿ: ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಗುರುವಾರ ನಡೆಯಲಿದ್ದು, ಮತದಾನ ಹೆಚ್ಚಳ ಮಾಡಲು ಚುನಾವಣೆ ಆಯೋಗ ಹಲವಾರು ರೀತಿಯಿಂದ ಮತದಾರರಿಗೆ ಜಾಗೃತಿ ಮೂಡಿಸಿದೆ. ಇತ್ತ ಯಾದಗಿರಿಯ ಹೋಟೆಲ್ ಮಾಲೀಕರೊಬ್ಬರು ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿಗೆ ಮುಂದಾಗಿದ್ದು, ಮಂಗಳವಾರ ತಮ್ಮ ಹಕ್ಕು ಚಲಾಯಿಸಿದವರಿಗೆ ಹೊಟ್ಟೆ ತುಂಬ ಉಚಿತ ಉಟ ನೀಡಲು ಮುಂದಾಗಿದ್ದಾರೆ.
ಜಿಲ್ಲೆಯ ಶಹಾಪುರ ನಗರದಲ್ಲಿರುವ ‘ಅಮ್ಮ ಕ್ಯಾಂಟೀನ್’ ಮಾಲೀಕರಾದ ಮಣಿಕಂಠರವರು ಈ ಬಂಪರ್ ಆಫರ್ ನೀಡಿದ್ದಾರೆ. ಬೆಳಿಗ್ಗೆಯಿಂದಲೇ ಈ ಆಫರ್ ಆರಂಭವಾಗಲಿದ್ದು, ಮತದಾನ ಮಾಡಿದವರು ಕ್ಯಾಂಟೀನ್ ಬಂದು ಕೈ ಬೆರಳು ತೋರಿಸಿದರೆ ಸಾಕು, ಫುಲ್ ಮಿಲ್ಸ್ ಊಟ ನೀಡಲಾಗುತ್ತದೆ.
Advertisement
Advertisement
ಅಮ್ಮನ ನೆನಪು: ಮಣಿಕಂಠ ಅವರು ಕಳೆದ ಒಂದು ವರ್ಷದ ಹಿಂದೆ ತಮ್ಮ ತಾಯಿಯ ನೆನಪಿನಲ್ಲಿ ಈ ಅಮ್ಮ ಕ್ಯಾಂಟೀನ್ ಆರಂಭಿಸಿದ್ದಾರೆ. ಕಡಿಮೆ ದರದಲ್ಲಿ ಬಡಜನರ ಹೊಟ್ಟೆ ತುಂಬಿಸುತ್ತಿರುವುದು ಈ ಹೋಟೆಲಿನ ಮತ್ತೊಂದು ವಿಶೇಷ. ಮತದಾನ ಪ್ರತಿಯೊಬ್ಬರ ಕರ್ತವ್ಯ ಅದನ್ನು ನಿಭಾಯಿಸಿದರೆ ಅವರು ನಮ್ಮ ದೇಶದ ಉತ್ತಮ ನಾಗರಿಕರಾಗುತ್ತಾರೆ. ಅಂತಹ ನಾಗರಿಕನಿಗೆ ಧನ್ಯವಾದ ಹೇಳಲು ಈ ಉಚಿತ ಊಟದ ಕೊಡುಗೆ ನೀಡಿದ್ದೇನೆ ಎಂದು ಮಣಿಕಂಠ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
ಇತ್ತ ದಾವಣಗೆರೆಯಲ್ಲೂ ಕೂಡ ಮತ ಹಾಕಿ ಬಂದ ಗ್ರಾಹಕರಿಗೆ ಊಟದ ಬಿಲ್‍ನಲ್ಲಿ ಶೇ.50 ರಷ್ಟು ಡಿಸ್ಕೌಂಟ್ ನೀಡುವುದಾಗಿ ನಗರದ ಪಿಬಿ ರಸ್ತೆಯಲ್ಲಿರುವ ಭರತ್ ಹೋಟೆಲ್ ಮಾಲೀಕರು ನೀಡಿದ್ದಾರೆ.