ಕೊಪ್ಪಳ: ಚುನಾವಣೆಯಲ್ಲಿ ಮತದಾರರಿಗೆ ಹಣ ಹೆಂಡದ ಹೊಳೆಯನ್ನೇ ಅಭ್ಯರ್ಥಿಗಳು ಹರಿಸೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಅಭ್ಯರ್ಥಿಗೆ ಮತದಾರರೆ ಹಣ ಭತ್ತವನ್ನು ಕೊಟ್ಟು ಚುನಾವಣೆಗೆ ಸಹಾಯ ಮಾಡುತ್ತಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ.
ಕೊಪ್ಪಳದ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸವರಾಜ ದಡೆಸುಗುರುಗೆ ಮತದಾರರೇ ಹಣ ಮತ್ತು ಭತ್ತವನ್ನು ನೀಡುತ್ತಿದ್ದಾರೆ.
ಇಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮತದಾರರಿಗೆ ಹಣವನ್ನು ನೀಡುತ್ತಾರೆ. ಆದ್ರೆ ಇಲ್ಲಿ ಉಲ್ಟಾ ಆಗಿದ್ದು, ಅಭ್ಯರ್ಥಿಗೆ ಮತದಾರರೆ ಹಣ ಮತ್ತು ಭತ್ತವನ್ನು ಕೊಡುತ್ತಿದ್ದಾರೆ. ಅದರಂತೆ ಇಂದು ಕ್ಷೇತ್ರದ ಸಿದ್ದಾಪುರ ಗ್ರಾಮದ ರೈತರೊಬ್ಬರು 101 ಚೀಲ ಭತ್ತವನ್ನು ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಸಹಾಯವನ್ನು ಮಾಡಿದ್ದಾರೆ.