ಮೈಸೂರು: ಮತ ಕೇಳಲು ಬಂದ ಸಚಿವರಿಗೆ ಮತದಾರ ಕ್ಲಾಸ್ ತೆಗೆದುಕೊಂಡ ಘಟನೆ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ನಡೆದಿದೆ.
ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕ ಹಾಗೂ ಸಚಿವ ತನ್ವೀರ್ ಸೇಠ್ ಮತದಾರನಿಂದ ತರಾಟೆಗೆ ಒಳಗಾಗಿದ್ದಾರೆ. ಮತದಾರ ರಸ್ತೆಯಲ್ಲಿ ಏಕಾಂಗಿಯಾಗಿ ನಿಂತು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ತಡೆಯಲು ಬಂದ ಸಚಿವರ ಆಪ್ತ ಕಾರ್ಯದರ್ಶಿಯನ್ನು ಲೆಕ್ಕಿಸದೆ ಅವಾಜ್ ಹಾಕಿದ್ದಾರೆ.
ಮೈಸೂರಿನ ಕನ್ನಡಪರ ಹೋರಾಟಗಾರ ಪರಮೇಶ್, ತನ್ವೀರ್ ಸೇಠ್ ಗೆ ಕ್ಲಾಸ್ ತೆಗೆದುಕೊಂಡ ವ್ಯಕ್ತಿ. ಎನ್.ಆರ್. ಕ್ಷೇತ್ರದ ರಾಘವೇಂದ್ರ ನಗರದಲ್ಲಿ ಮತಯಾಚನೆಗಾಗಿ ತನ್ವೀರ್ ಸೇಠ್ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಎದುರಾದ ಮತದಾರ ಪರಮೇಶ್, ತನ್ವೀರ್ ಸೇಠ್‍ಗೆ ಹಲವು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆಗೈದರು.
ರಸ್ತೆ ರೀಪೇರಿ ಮಾಡಿಸಿಲ್ಲ. ನಾನು ಅಂದಿನಿಂದಲೂ ನಿಮಗೆ ನಿಮ್ಮ ತಂದೆ ಹಾಗೂ ನಿಮಗೆ ಮತ ಹಾಕ್ತಿದ್ದೀವಿ. ಆದ್ರೆ ಮನೆ ಬಳಿ ಕೆಲಸ ಮಾಡಿಕೊಡಿ ಅಂತ ಬಂದ್ರೆ ಕ್ಯಾರೇ ಅನ್ನೊಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.