ಬೆಂಗಳೂರು: ವೋಟರ್ ಡೇಟಾ ಹಗರಣ (Voter Id Scam) ಆರೋಪ ಸಂಬಂಧ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ (BJP) ಯವರು ಮಾಡುತ್ತಿರುವ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ. ಲೆಟರ್ ಹೆಡ್, ಪ್ಯಾಡ್, ನೋಟ್ ಮೆಶಿನ್ ಎಲ್ಲಾ ಸಿಕ್ಕಿದೆ. ಕೂಡಲೇ ಅಶ್ವಥ್ ನಾರಾಯಣ್ (Ashwath Narayan) ಅರೆಸ್ಟ್ ಮಾಡಬೇಕು. ಕೇಂದ್ರ ಚುನಾವಣಾ ಆಯೋಗದ ಮುಂದೆ ಹೋಗ್ತೀವಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಾರ್ನಿಂಗ್ ಮಾಡಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ಬಿಜೆಪಿಯವರು ಮಾಡುತ್ತಿರುವ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ. ಕೃಷ್ಣಪ್ಪ ರವಿಕುಮಾರ್ ಚಿಲುಮೆ ಸಂಸ್ಥೆಯ ಮಾಲೀಕ. ಇವನು ಪುಣ್ಯಾತ್ಮ ಅಲ್ಲ ದುರಾತ್ಮ. ಇವನೇ ಬಿಎಲ್ ಓಗಳನ್ನ ನೇಮಕ ಮಾಡಿಬಿಟ್ಟಿದ್ದಾನೆ. ಬೇಕಾದವ್ರನ್ನ ಸೇರಿಸಿ, ಬೇಡದವ್ರನ್ನ ಡಿಲೀಟ್ ಮಾಡಿದ್ದಾರೆ. ಇದೆಲ್ಲವನ್ನೂ ಕ್ಯಾನ್ಸಲ್ ಮಾಡಿಸಿ ಎಂದು ಆಗ್ರಹಿಸಿದರು.
Advertisement
Advertisement
ಡೂಪ್ಲಿಕೇಟ್ ಬಿಎಲ್ ಓ ಗಳಿಂದಲ್ಲ, ನಿಜವಾದ ಬಿಎಲ್ ಓ ಗಳಿಂದ ಸರ್ವೇ ಮಾಡಿಸಿ. ಚೀಫ್ ಕಮಿಷನರ್, ಚುನಾವಣಾಧಿಕಾರಿಗಳ ಮೇಲೆ ಡಿವಿಸಿಯವರು ತನಿಖೆ ಮಾಡೋದಕ್ಕಾಗುತ್ತಾ..?, ಬೆಂಗಳೂರು ಸಚಿವರು, ಸಿಎಂ ಮೇಲೆ ಇವ್ರು ತನಿಖೆ ಮಾಡೋಕ್ಕಾಗುತ್ತಾ..? ಪೊಲೀಸ್ ಕಮಿಷನರ್ ಗೆ ಸಿಎಂ ಹಾಗೂ ಇತರರ ಮೇಲೆ ದೂರು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಬ್ಲಾಕ್ ಮನಿಯನ್ನು ವೈಟ್ ಮಾಡಿತಾ ಚಿಲುಮೆ..?- ಡಿಕೆಶಿ ಹೊಸ ಬಾಂಬ್
Advertisement
ಪರ್ಮಿಶನ್ ಕೊಟ್ಟು ಕ್ಯಾನ್ಸಲ್ ಮಾಡಿದ್ರೆ ಏನರ್ಥ. ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ರೆ ಏನರ್ಥ..? ತಪ್ಪಾಗಿದೆ ಅಂತಾ ಅರ್ಥ ಅಲ್ವಾ, ಪ್ರಭಾವಿಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ ಯಾಕೆ..?, ಪ್ರೈವೆಸಿಯನ್ನ ಕಳ್ಳತನ ಮಾಡಿರೋದು ಇದು. ಕೂಡಲೇ ಅಶ್ವಥ್ ನಾರಾಯಣ್ ಅವರನ್ನು ಅರೆಸ್ಟ್ ಮಾಡಬೇಕು ಎಂದು ಆಕ್ರೋಶ ಹೊರಹಾಕಿದರು.
ಲೆಟರ್ ಹೆಡ್, ಪ್ಯಾಡ್, ನೋಟ್ ಮೆಶಿನ್ ಎಲ್ಲಾ ಸಿಕ್ಕಿದೆ. ನಮ್ಮ ಮನವಿ ಕೇಳದೇ ಇದ್ರೆ ಕೇಂದ್ರ ಚುನಾವಣಾ ಆಯೋಗದ ಮುಂದೆ ಹೋಗ್ತೀವಿ. ಕ್ರಮ ತೆಗೆದುಕೊಳ್ಳದೇ ಇದ್ರೆ ಕೇಂದ್ರ ಚುನಾವಣಾ ಆಯೋಗದ ಮಂದೆ ಹೋಗ್ತೀವಿ. ಇದು ದೊಡ್ಡ ಫ್ರಾಡ್ ಕೆಲಸ ಇಡೀ ರಾಜ್ಯಕ್ಕೆ ಮಾಡಿರೋ ಅನ್ಯಾಯ ಇದು ಪ್ರಜಾಪ್ರಭುತ್ವದ ಕೊಲೆ ಎಂದರು.
2 ತಿಂಗಳ ಹಿಂದೆಯೇ ಎಲ್ಲ ಹಗರಣ ಪಾಲಿಕೆ ಕಮೀಷನರ್, ಮುಖ್ಯ ಚುನಾವಾಧಿಕಾರಿಗೆ ಮಾಹಿತಿ ಕೊಡಲಾಗಿತ್ತು. ಜಾತಿ, ವೈಯಕ್ತಿಕ ಮಾಹಿತಿ ಕೇಳ್ತಾ ಇದ್ದಾರೆ ಅಂತಾ ಹೇಳಿದೆ. ನಾನೇ ಖುದ್ದು ಹೋಗಿ ಮಾಹಿತಿ, ದೂರು ನೀಡಿದೆ. ಆದ್ರೂ ಯಾರು ಕ್ರಮಕೈಗೊಂಡಿಲ್ಲ. 10 ಜನ ಹುಡುಗರು ಮಹದೇವಪುರದಲ್ಲಿ ಸಮನ್ವಯ ಟ್ರಸ್ಟ್ ನಿಂದ ಸರ್ವೆಗೆ ಹೋಗಿದ್ರು. ಒಂದು ರೂಪಾಯಿ ಕೊಡಲಿಲ್ಲ. 10 ಸಾವಿರ ರೂ. ಸಂಬಳ ಅಂತಾ ಹೇಳಿ ಕೈ ಕೊಟ್ಟರು ಎಂದು ಹೇಳಿದರು.
ಆಯುಕ್ತರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಜೊತೆ ಮಾತನಾಡುತ್ತೇನೆ ಅಂದಿದ್ದಾರೆ. ಅವರು ನಿರ್ಧಾರ ಮಾಡಿದ್ರೆ ನ್ಯಾಯಾಂಗ ತನಿಖೆಗೆ ವಹಿಸುತ್ತವೆ ಅಂದಿದ್ದಾರೆ. ನಾವು ಕಾದು ನೋಡುತ್ತೇವೆ. ಇಲ್ಲದೆ ಹೊದ್ರೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.