ಬೆಂಗಳೂರು: ಚಿಲುಮೆ (Chilume) ಯಿಂದ ಮತದಾರರ ಪಟ್ಟಿ ಕಳವು ಪ್ರಕರಣದಲ್ಲಿ ರಾಜಕಾರಣಿಗಳ ಕೈವಾಡವಿರುವುದು ಬಯಲಾಗಿದೆ. ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳು ಶಾಮೀಲುಲಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಚಿಲುಮೆ ಸಂಸ್ಥೆ ಜೊತೆ ಪ್ರಭಾವಿ ರಾಜಕಾರಣಿಗಳ ಕರಾರು ಪತ್ರ ಪತ್ತೆಯಾಗಿದ್ದು, ಇಬ್ಬರು ರಾಜಕಾರಣಿಗಳು ಚುನಾವಣಾ ಸಮೀಕ್ಷೆ (Election Survey) ಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಪ್ರಭಾವಿ ರಾಜಕಾರಣಿಯ ಲೆಟರ್ ಹೆಡ್‍ಗಳು ಕೂಡ ಪತ್ತೆಯಾಗಿದೆ.
11ಕ್ಕೂ ಹೆಚ್ಚು ರಾಜಕಾರಣಿಗಳು, ಐಎಎಸ್ (IAS), ಕೆಎಎಸ್ (KAS) ಅಧಿಕಾರಿಗಳ ವಿಸಿಟಿಂಗ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. 7ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಡೆಸಿದ ಕೆಲವು ಕ್ಷೇತ್ರಗಳ ಸಮೀಕ್ಷೆಗಳ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಸಂಸ್ಥೆಯ ಲೆಟರ್‍ಹೆಡ್‍ಗಳು ಕೂಡ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ
ದಾಳಿ ವೇಳೆ ಸಿಕ್ಕಿದ್ದೇನು..?: ಅಸಲಿಗೆ ಚಿಲುಮೆ ಸಂಸ್ಥೆಯ ಮೇಲಿನ ದಾಳಿಯಲ್ಲಿ ಅಧಿಕೃತ ಕಚೇರಿ ಹೊಂದಿದ್ದರೂ ಅನಧಿಕೃತವಾಗಿ ಬಿಲ್ಡಿಂಗ್ ಒಂದರಲ್ಲಿ ವ್ಯವಹಾರ ನಡೆಸುತ್ತಿರುವುದು ಬಯಲಾಗಿದೆ. ಈ ಕಟ್ಟಡದಲ್ಲಿನ ದಾಳಿ ವೇಳೆ ಪೊಲೀಸರಿಗೆ ಭರ್ಜರಿ ದಾಖಲೆ ಸಿಕ್ಕಿದೆ. ನಾಲ್ಕು ಬ್ಯಾಗ್ ಗಳು, ಒಂದು ಚೀಲದಲ್ಲಿ ಪೊಲೀಸರು ಚೆಕ್ ಗಳು, ಬ್ರೌಷರ್ ಗಳು, ಲೆಟರ್ ಹೆಡ್ ಗಳು, ಸ್ಕಾಲರ್ ಶಿಪ್ ದಾಖಲಾತಿಗಳನ್ನು ಕೊಂಡೊಯ್ದಿದ್ದಾರೆ.
ಅಸಲಿಗೆ ಈ ಚೆಕ್ ಗಳು ಲೆಟರ್ ಹೆಡ್ ಗಳು ಚಿಲುಮೆ ಸಂಸ್ಥೆಯದ್ದಲ್ಲ. ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಚೆಕ್, ಲೆಟರ್ ಹೆಡ್ ಬ್ರೌಷರ್ ಪತ್ತೆಯಾಗಿದೆ. ಆ ಪ್ರಭಾವಿ ರಾಜಕಾರಣಿಗೂ ಚಿಲುಮೆಗೂ ಇರುವ ಸಂಬಂಧವೇನು..?, ಚಿಲುಮೆ ಹೆಸರಲ್ಲಿ ಆ ಕಟ್ಟಡದಲ್ಲಿ ರಾಜಕಾರಣಿ ಮಾಡ್ತಿದ್ದ ವ್ಯವಹಾರವಾದ್ರು ಏನು ಎನ್ನುವುದರ ಕುರಿತು ಎಲ್ಲ ದಾಖಲಾತಿಗಳನ್ನು ಹಲಸೂರು ಗೇಟ್ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.