-ನಾಳೆ ಕರಡು ಮತದಾರರ ಪಟ್ಟಿ ಪ್ರಕಟ
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆದಿದೆ. ಕರಡು ಮತದಾರರ ಪಟ್ಟಿಯನ್ನು ಡಿ. 16 ರಂದು ಅಂದರೆ ನಾಳೆ ಪ್ರಕಟಿಸಲಾಗುತ್ತಿದೆ. 2020ರ ಜನವರಿ 15ರವರೆಗೆ ಈ ಮತದಾರರ ಕರಡು ಪಟ್ಟಿ ಕುರಿತು ಮತದಾರರು ಪರಿಶೀಲಿಸಿ ಹಕ್ಕು ಹಾಗೂ ತಿದ್ದುಪಡಿಗಳನ್ನು ಸಲ್ಲಿಸಬಹುದು.
ಕರಡು ಮತದಾರರ ಪಟ್ಟಿಯ ಕುರಿತಂತೆ ಬರುವ ಹಕ್ಕು ಹಾಗೂ ತಿದ್ದುಪಡಿಗಳನ್ನು 2020ರ ಜನವರಿ 27ರ ಒಳಗಾಗಿ ವಿಲೇವಾರಿ ಮಾಡಲಾಗುತ್ತೆ. ಫೆಬ್ರವರಿ 4ಕ್ಕೆ ಪೂರಕ ಮತದಾರರ ಪಟ್ಟಿ ತಯಾರಿಸಿ ಫೆ.7 ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
Advertisement
Advertisement
ಹೀಗಾಗಿ ನಾಳೆ ರಾಜ್ಯಾದ್ಯಂತ ಕರಡು ಮತದಾರರ ಪಟ್ಟಿ ಪ್ರಕಟವಾಗುತ್ತಿದ್ದು,ಮತದಾರರ ಪರಿಶೀಲನಾ ಕಾರ್ಯವು ಜನವರಿ 15ರವರೆಗೂ ನಡೆಯಲಿದೆ. ಮತದಾರರು ಪಟ್ಟಿಯಲ್ಲಿ ಹೆಸರುಗಳನ್ನು ಪರಿಶೀಲಿಸಿಕೊಳ್ಳಬಹುದು. ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವವರು ಮತ್ತು ಮತದಾರರ ಪಟ್ಟಿಯಲ್ಲಿ ದೋಷ ಇದ್ದರೆ ವಿಳಾಸ ತಪ್ಪಿದ್ರೆ ಪರಿಶೀಲನೆ ನಡೆಸಿ ಚುನಾವಣಾ ಸೇವಾ ಕೇಂದ್ರಗಳಿಗೆ ತೆರಳಿ ಸರಪಡಿಸಿಕೊಳ್ಳಬಹುದು.
Advertisement
ಕರಡು ಮತದಾರರ ಪಟ್ಟಿ ಮಾಹಿತಿ ಎಲ್ಲೆಲ್ಲಿ ಸಿಗುತ್ತೆ?
ಕರುಡು ಮತದಾರರ ಪಟ್ಟಿಯನ್ನು ಚುನಾವಣಾ ಅಧಿಕಾರಿಗಳು ಆಯಾ ಆಯಾ ಗ್ರಾಮಪಂಚಾಯಿತಿ, ನಾಡ ಕಚೇರಿ, ತಾಲೂಕು ಕಚೇರಿ, ಜಿಲ್ಲಾ ಕಚೇರಿ, ಬೆಂಗಳೂರನಂತಹ ಸಿಟಿಗಳಲ್ಲಿ ಬಿಬಿಎಂಪಿ ಆಫೀಸ್, ಎಇಆರ್ ಓ ಆಫೀಸ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಜೊತೆಗೆ ವೆಬ್‍ಸೆಟ್ ಗಳಲ್ಲೂ ಕೂಡ ಕರುಡು ಮತದಾರರ ಪಟ್ಟಿಯನ್ನು ನೋಡಬಹುದಾಗಿದೆ ವೆನ್ ಸೈಟ್ ವಿವರ ಹೀಗಿದೆ. https://ceokarnataka.kar.nic.in/ ಮತ್ತು DEO ವೆಬ್ ಸೈಟ್ ಗಳಲ್ಲೂ ಕೂಡ ನೋಡಬಹುದಾಗಿದೆ.