– ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ಭರ್ಜರಿ ಗೆಲುವು
ಚಿಕ್ಕಬಳ್ಳಾಪುರ: ಜೆಡಿಎಸ್ (JDS) ಪಕ್ಷದ ಬಹಳಷ್ಟು ಜನ ಸುಧಾಕರ್ (K Sudhakar) ಮೈತ್ರಿ ಅಭ್ಯರ್ಥಿ ಎಂದು ಭಾವಿಸಿಲ್ಲ. ಸ್ವತಃ ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿದ್ದಾರೆ. ಇವೆಲ್ಲದರ ಪ್ರತಿಫಲ ಈಗ ರಿಸಲ್ಟ್ ರೂಪದಲ್ಲಿ ನೋಡುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ಕೆ.ಸುಧಾಕರ್ ಹೇಳಿದ್ದಾರೆ.
Advertisement
ಚಿಕ್ಕಬಳ್ಳಾಪುರದ (Chikkaballapura) ನಾಗಾರ್ಜುನ ಕಾಲೇಜು ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ. ಇದು ಕೋಟ್ಯಂತರ ಜನರ ಆಸೆ. ಜನ ಚಿಕ್ಕಬಳ್ಳಾಪುರ ವಿಕಸಿತ ಚಿಕ್ಕಬಳ್ಳಾಪುರ ಆಗಬೇಕೆಂದು ಬಯಸಿದ್ದಾರೆ. ನಮಗೆ ದೊಡ್ಡ ಶಕ್ತಿ ನಮ್ಮ ನಾಯಕರು ಮತ್ತು ಕಾರ್ಯಕರ್ತರು. ಮಾಜಿ ಪ್ರಧಾನಿ ಹೆಚ್‌ಡಿಡಿ ಮತ್ತು ಹೆಚ್‌ಡಿಕೆ ಬೆಂಬಲ ಚೆನ್ನಾಗಿತ್ತು. ಜೆಡಿಎಸ್ ಕಾರ್ಯಕರ್ತರ ಬೆಂಬಲವೂ ಚೆನ್ನಾಗಿತ್ತು ಎಂದರು. ಇದನ್ನೂ ಓದಿ: ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ
Advertisement
Advertisement
ವಿಧಾನಸಭೆ ಸೋಲಿಗೆ ಡಾ.ಕೆ.ಸುಧಾಕರ್ ಸೇಡು ತೀರಿಸಿಕೊಂಡಿದ್ದು, ಲೋಕಸಭೆಯಲ್ಲಿ ಗೆದ್ದು ತಮ್ಮ ಶಕ್ತಿ ಪ್ರದರ್ಶನ ತೋರಿದ್ದಾರೆ. ಒಟ್ಟು 8,22,619 ಮತಗಳನ್ನು ಪಡೆದಿರುವ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ 1,63,460 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಒಟ್ಟು 6,59,159 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ
Advertisement