ಬಹುಭಾಷಾ ನಟ ಪ್ರಕಾಶ್ ರೈ ಇಂದು ಬೆಳಗ್ಗೆ ಮತದಾನ ಮಾಡಿ, ತಾವು ಮತದಾನ ಮಾಡಿರುವ ಕುರಿತಂತೆ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ. ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ನಿಮ್ಮ ಮಾತನ್ನು ಅನುಮೋದಿಸುತ್ತೇವೆ ಎಂದಿದ್ದಾರೆ.
I have Voted .. please go and Vote #justasking #SaveDemocracySaveIndia pic.twitter.com/shg7jDSVpU
— Prakash Raj (@prakashraaj) April 26, 2024
ವೋಟು ಹಾಕಿದ ನಂತರ ಪೋಸ್ಟ್ ಮಾಡಿದ ವಿಡಿಯೋದಲ್ಲಿ ದೇಶದ ಬದಲಾವಣೆಗಾಗಿ ಮತದಾನ ಮಾಡಿರುವೆ, ದ್ವೇಷದ ವಿರುದ್ಧ ಮತ ಹಾಕಿರುವೆ. ಸಂಸತ್ ನಲ್ಲಿ ನನ್ನ ಪರವಾಗಿ ಧ್ವನಿ ಕೇಳಲಿ ಎಂದು ವೋಟು ಮಾಡಿದ್ದೇನೆ. ದಯಮಾಡಿ ವೋಡು ಮಾಡಿ, ಬದಲಾವಣೆಗೆ ಮತ ಹಾಕಿ ಎಂದು ಮಸೇಜ್ ನೀಡಿದ್ದರು.
ಸಂಜೆ ಹೊತ್ತಿಗೆ ಮೂವತ್ತೆಂಟು ಸಾವಿರಕ್ಕೂ ಹೆಚ್ಚು ಜನ ವಿಡಿಯೋವನ್ನು ಲೈಕ್ ಮಾಡಿದ್ದರೆ, 215ಕ್ಕೂ ಹೆಚ್ಚು ಜನರ ಬುಕ್ ಮಾರ್ಕ್ ಮಾಡಿಕೊಂಡಿದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಎರಡೂ ಹೇರಳವಾಗಿಯೇ ಇವೆ.