ಕಾಂತಾರ (Kantara) ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿದ್ದ ಸಪ್ತಮಿ ಗೌಡ ಮತದಾನ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು.
ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್ ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ಮತದಾನ ಮಾಡಿ, ಮಾದರಿಯಾದರು. ದಂಪತಿ ಸಮೇತ ಬೆಳಗ್ಗೆ 7.20ಕ್ಕೆ ಆಗಮಿಸಿದ್ದ ಗಣೇಶ್ ಮತದಾನ ಮಾಡಿದರು. ಮತದಾನ ಮಾಡಿ ಮಾತನಾಡಿದ ಗಣೇಶ್, ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು.
ಆರ್.ಆರ್ ನಗರದಲ್ಲಿ ಗಣೇಶ್ ದಂಪತಿ ತಮ್ಮ ಹಕ್ಕು ಚಲಾಯಿಸಿದರೆ, ಜೆಪಿ ನಗರ ಆಕ್ಸ್ ಫರ್ಡ್ ಮತಗಟ್ಟೆಯಲ್ಲಿ ನಟ ಸುದೀಪ್ ತಾಯಿ ಸರೋಜಾ ಅವರು ಮತ ಚಲಾಯಿಸಿದರು. ನಂತರ ಸುದೀಪ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ.