ಮತಗಳ್ಳತನ ಆರೋಪ: ಆ.5 ರಂದು ಅರ್ಧ ಕಿ.ಮೀ ರಾಹುಲ್ ಪಾದಯಾತ್ರೆ, ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

Public TV
1 Min Read
Rahul Gandhi 4

ಬೆಂಗಳೂರು: ಆಗಸ್ಟ್‌ 5 ರಂದು ಬೆಂಗಳೂರಲ್ಲಿ ರಾಹುಲ್ ಗಾಂಧಿ (Rahul Gandhi) ಹವಾ ಇರಲಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ ಮಾಡಲಾಗಿದ್ದು, ಹಲವು ಕ್ಷೇತ್ರಗಳಲ್ಲಿ ಇದೇ ರೀತಿ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟನೆ ನಡೆಸುತ್ತಿದೆ. ಮತಗಳ್ಳತನ (Vote Rigging) ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕದಿಂದಲೇ ಕಾಂಗ್ರೆಸ್ ಪ್ರತಿಭಟನೆಯನ್ನ ಲಾಂಚ್ ಮಾಡುತ್ತಿದೆ.

ಮೌರ್ಯ ಸರ್ಕಲ್‌ನಿಂದ ಅರ್ಧ ಕಿ.ಮೀ ಪಾದಯಾತ್ರೆ, ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾ ಸಮಾವೇಶ ನಡೆಸಿ, ಬಳಿಕ ನಿಯೋಗದ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಲು‌ ಕಾಂಗ್ರೆಸ್ ತೀರ್ಮಾನಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಇವತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ, ಡಿಸಿಎಂ, ಕೆಲ ಸಚಿವರು, ಶಾಸಕರು ಭಾಗವಹಿಸಿ ಅಂತಿಮ ತೀರ್ಮಾನ ನಡೆಸಿದರು. ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾ ಸಮಾವೇಶವನ್ನ ಅಧಿಕೃತವಾಗಿ ಘೋಷಣೆ ಮಾಡಿದರೆ, ಪಾದಯಾತ್ರೆಯನ್ನ ಗುಟ್ಟಾಗಿಯೇ ಉಳಿಸಿದ್ದಾರೆ. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ಆಗ್ರಹ; ನಾಳೆ ಬೆಂಗಳೂರು, ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ: ನಾರಾಯಣಸ್ವಾಮಿ

ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, ಮಹದೇವಪುರದಲ್ಲಿ ಅಕ್ರಮ ಆಗಿದೆ. ದಿನೇಶ್ ಗುಂಡೂರಾವ್ ಕ್ಷೇತ್ರ ಗಾಂಧಿನಗರದಲ್ಲಿ‌ ಅಕ್ರಮ ಆಗಿದೆ. 7 ಸಾವಿರ ಮತ ಅಕ್ರಮ ಆಗಿವೆ. ಎಲ್ಲ ರಿಸರ್ಚ್ ಮಾಡಿದ್ದೇವೆ. ನಮ್ಮ ನಾಯಕರ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಪಾದಯಾತ್ರೆ ಮಾಡ್ತೀರಾ ಎಂಬ ಪ್ರಶ್ನೆಗೆ ಗುಟ್ಟು ಬಿಟ್ಟುಕೊಡದ ಡಿಕೆಶಿ, ಕಾನೂನಿನ ಪ್ರಕಾರ ಏನೆಲ್ಲ ಮಾಡಬೇಕು ಮಾಡ್ತೀವಿ, ಎಸ್‌ಓಪಿ ಪ್ರಕಾರ ಹೋಗುತ್ತೇವೆ, ಕಾನೂನು ಉಲ್ಲಂಘಿಸಲ್ಲ ಎಂದರು. ಇದನ್ನೂ ಓದಿ: ಆಗಸ್ಟ್ ಅಂತ್ಯದಿಂದ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಜಾರಿ: ಪರಮೇಶ್ವರ್

Share This Article