ಕಲಬುರಗಿ: ಮತ ಯಂತ್ರದಲ್ಲಿ ಬಿಜೆಪಿ (BJP) ಬಟನ್ ಒತ್ತಿದರೆ ಅದೇ ನಿಮಗೆ ಎಕೆ 47 ಇದ್ದ ಹಾಗೆ, ಹಿಂದೂಗಳು ಸುರಕ್ಷಿತರಾಗಿ ಉಳಿಯಬೇಕಾದರೆ ಅದನ್ನೇ ಒತ್ತಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ (Hubballi) ನೇಹಾ ಹತ್ಯೆ ಪ್ರಕರಣ ಉಲ್ಲೇಖಿಸಿ, ಬಿಜಾಪುರದಲ್ಲಿ ಒಂದಾದರು ಹಿಂದೂ ಹೆಣ್ಣು ಮಕ್ಕಳಿಗೆ ಕೆಣಕಿರುವ ಘಟನೆ ಆಗಿದೆಯಾ? ಮೊದಲು ತರಕಾರಿ ತರಲು ಹೋದ್ರೆ ಎ ಮಾಲ್ ಬಹುತ್ ಅಚ್ಚಾ ಹೈ ಎಂದು ಪರೋಕ್ಷವಾಗಿ ಹೇಳುತ್ತಿದ್ದರು. ಈಗ ನಮ್ಮ ಜನರು ಕೂಡ ತುಂಬಾ ಜಾಣರಾಗಿದ್ದಾರೆ. ಕುಂಕುಮ ಹಚ್ಚಿಕೊಂಡಿರುವವರನ್ನ ನೋಡಿ ಖರೀದಿ ಮಾಡ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ನೇಹಾ ಕೊಲೆ ಆರೋಪಿ ಬಂಧಿಸಿದ ತಂಡಕ್ಕೆ ‘ಕಾಪ್ ಆಫ್ ದಿ ಮಂತ್’ ಅವಾರ್ಡ್
Advertisement
ಈಗ ವಕ್ಫ್‍ಗೆ 12 ಲಕ್ಷ ಎಕರೆ ಜಮೀನಿದೆ. ಅವರು ಒಂದೇ ಒಂದು ಸಣ್ಣ ಗೋರಿ ಇದ್ದರೂ ಅದಕ್ಕೆ ಹಸಿರು ಚಾದರ ಹೊದಿಸಿ ಬಿಡ್ತಾರೆ. ಅದು ಯಾರ ಗೋರಿಯೋ ಏನೋ ಗೊತ್ತಿಲ್ಲ. ಪಂಡಿತ್ ಅಂತೆ, ಸುಮ್ಮನೆ ಪಂಡಿತ ಜವಾಹರ್ ಲಾಲ್ ನೆಹರು ಅಂತಾರೆ. ಇವರ ಸಮಯದಲ್ಲಿ 12 ಲಕ್ಷ ಎಕರೆ ಜಮೀನನ್ನು ವಕ್ಫ್‍ಗೆ ಕೊಟ್ಟಿದ್ದಾರೆ. ರಾಹುಲ್ ಯಾವುದು ಗೊತ್ತಿಲ್ಲ, ಪ್ರಿಯಾಂಕ ಯಾವುದು ಗೊತ್ತಿಲ್ಲ, ರಾಬರ್ಟ್ ವಾದ್ರ ಯಾವುದು ಅಂತಾನೂ ಗೊತ್ತಿಲ್ಲ. ಇಂದಿರಾ ಗಾಂಧಿ ಗಂಡ ಯಾವುದು ಏನು ಅಂತಾ ಗೊತ್ತಿಲ್ಲ ಎಂದು ಗಾಂಧಿ ಪರಿವಾರದ ವಿರುದ್ಧ ಏಕವಚನದಲ್ಲಿ ಅವರು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಕಲಬುರಗಿಯ ಎಂಆರ್‍ಎಂಸಿ ಮೆಡಿಕಲ್ ಕಾಲೇಜಿನಲ್ಲಿ ಸ್ಟೈಫಂಡ್ ಹಗರಣವಾಗಿದೆ. ಎಂಬಿಬಿಎಸ್ ಹಾಗೂ ಎಂಡಿ ವಿದ್ಯಾರ್ಥಿಗಳ ಸ್ಟೈಫಂಡ್ ಹಣ ಲೂಟಿ ಮಾಡಲಾಗಿದೆ. ಹಗರಣದಲ್ಲಿ ಕಾಂಗ್ರೆಸ್ ನಾಯಕ ಇದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
Advertisement
ಮೋದಿಯವರು ಬಂದಾಗ ಕಾಂಗ್ರೆಸ್‍ನವರು ಚೊಂಬು ಪ್ರದರ್ಶನ ಮಾಡಿದ ವಿಚಾರಕ್ಕೆ, ದೇಶಕ್ಕೆ ಚೊಂಬು ಕೊಟ್ಟಿದ್ದೇ ಕಾಂಗ್ರೆಸ್‍ನವರು. ಅವರ ಅಧಿಕಾರದ ಅವಧಿಯಲ್ಲಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಏಲ್ಲಿತ್ತು? ಮೋದಿಯವರ ಕಾಲದಲ್ಲಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಏಲ್ಲಿಗೆ ಬಂದಿದೆ? ಈ ದೇಶ ಲೂಟಿ ಮಾಡಿದ್ದೇ ಕಾಂಗ್ರೆಸ್ ನಾಯಕರು, ಡಿಕೆಶಿ ಬಳಿ 2 ಸಾವಿರ ಕೋಟಿ ರೂ. ಆಸ್ತಿ ಏಲ್ಲಿಂದ ಬಂದಿದೆ? ಈ ಹಿಂದೆ ಕೋತ್ವಾಲ್ ರಾಮಚಂದ್ರಗೆ ಸಿಗರೇಟ್ ತಂದು ಕೊಡುತ್ತಿದ್ದರು. ಇಂತಹವರ ಬಳಿ ಇಷ್ಟು ಹಣ ಹೇಗೆ ಬಂತು ಉತ್ತರಿಸಲಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
2047ರ ವೇಳೆಗೆ ಪಿಎಫ್‍ಐ, ಎಸ್‍ಡಿಪಿಐ ಸೇರಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಪಣ ತೊಟ್ಟಿದ್ದಾರೆ. ಅವರ ಕೆಲವು ಪ್ರಕರಣಗಳು ಹೊರ ಬರುತ್ತಿವೆ. ಸಾಕಷ್ಟು ಪ್ರಕರಣಗಳು ಹೊರಗೆ ಬರುತ್ತಿಲ್ಲ. ಹಿಂಗೂ ರಾಷ್ಟ್ರ ಆಗಿ ಸನಾತನ ಧರ್ಮ ಉಳಿಯಬೇಕು ಎಂದರೆ ನೀವು ಮೋದಿಗೆ ಮತ ಹಾಕಿ ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಫಯಾಜ್, ಕುಟುಂಬದವರ ಒಳಸಂಚು ಇದೆ ಎನಿಸುತ್ತಿದೆ: ನೇಹಾ ತಂದೆ ಆರೋಪ