ಕೀವ್: ಶಸ್ತ್ರಾಸ್ತ್ರಗಳನ್ನು ನೀಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಮನವಿ ಮಾಡಿ, ರಷ್ಯಾ ಬಗ್ಗೆ ಭಯವಿದೆಯೇ ಎಂದೂ ಪ್ರಶ್ನಿಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವೀಡಿಯೊ ಸಂದೇಶದಲ್ಲಿ ಏನಿದೆ?: ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳು ಮತ್ತು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಹಲವು ರಾಷ್ಟ್ರಗಳು ಭರವಸೆ ನೀಡಿವೆ. ಆದರೆ ಉಕ್ರೇನ್‍ಗೆ ಯುದ್ಧ ಟ್ಯಾಂಕರ್‌ಗಳು, ವಿಮಾನಗಳು ಮತ್ತು ಜಲಾಂತರ್ಗಾಮಿಗಳ ಅವಶ್ಯಕತೆ ಇದೆ. ನಮ್ಮ ಪಾಲುದಾರ ರಾಷ್ಟ್ರಗಳು ಯಾವೆಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿವೆಯೋ, ಯಾವೆಲ್ಲ ಶಸ್ತ್ರಾಸ್ತ್ರಗಳು ಧೂಳು ಹಿಡಿಯುತ್ತಿವೆಯೋ ಅವು ಉಕ್ರೆನ್‍ಗಾಗಿ ಮಾತ್ರವಲ್ಲ, ಇಡೀ ಯುರೋಪಿನ ಸ್ವಾತಂತ್ರ್ಯಕ್ಕಾಗಿ ಅಗತ್ಯವಾಗಿದೆ ಎಂದಿದ್ದಾರೆ.
ಶಸ್ತ್ರಾಸ್ತ್ರ ನೀಡುವಂತೆ ಮನವಿ: ನ್ಯಾಟೊ ಹೊಂದಿರುವ ಶೇ 1 ರಷ್ಟು ಯುದ್ಧ ವಿಮಾನಗಳು ಮತ್ತು ಶೇ 1 ರಷ್ಟು ಟ್ಯಾಂಕ್‍ಗಳು ಉಕ್ರೇನ್‍ಗೆ ಬೇಕಾಗಿವೆ. ನಾವು ಅದಕ್ಕಿಂತ ಹೆಚ್ಚೇನೂ ಕೇಳುತ್ತಿಲ್ಲ. ನಾವು ಈಗಾಗಲೇ 31 ದಿನಗಳಿಂದ ಕಾಯುತ್ತಿದ್ದೇವೆ. ಯೂರೋ ಅಟ್ಲಾಂಟಿಕ್ ಸಮುದಾಯದ ಉಸ್ತುವಾರಿ ಯಾರು? ಇತರರಿಗೆ ಬೆದರಿಕೆಯೊಡ್ಡುತ್ತಾ ಈಗಲೂ ರಷ್ಯಾವೇ ಉಸ್ತುವಾರಿಯಾಗಿ ಮುಂದುವರಿದಿದೆಯೇ?. ಪೂರ್ವ ಯುರೋಪ್‍ನಲ್ಲಿರುವ ರಷ್ಯಾ ನಿರ್ಮಿತ ಯುದ್ಧ ವಿಮಾನಗಳನ್ನು ಇನ್ನೂ ಉಕ್ರೇನ್‍ಗೆ ರವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ
ಫೆಬ್ರವರಿ 24ರಿಂದ ರಷ್ಯಾ ದಾಳಿಯ ಪರಿಣಾಮ ಉಕ್ರೇನ್‍ನ ಸುಮಾರು 30 ಲಕ್ಷ ಜನರು ತಮ್ಮ ರಾಷ್ಟ್ರ ತೊರೆದು ವಲಸೆ ಹೋಗಿದ್ದು, ಪಶ್ಚಿಮ ರಾಷ್ಟ್ರಗಳ ಬೆಂಬಲ ಕೋರಿದ್ದಾರೆ. ನೂರಾರು ನಾಗರಿಕರು ಸಾವಿಗೀಡಾಗಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ